ಚಿತ್ರದುರ್ಗ : ಬಂಗಾರದ ನಾಣ್ಯಗಳನ್ನು ಕೊಡುವುದಾಗಿ ವಂಚಿಸಿದ್ದ ಆರೋಪಿಯನ್ನು ಮೊಳಕಾಲ್ಮೂರಿನ ರಾಂಪುರ ಪೊಲೀಸರು ಬಂಧಿಸಿ ಅವನಿಂದ 7.70ಲಕ್ಷ ಹಣ ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಆಂಧ್ರದ ಮಿನಿಗಾ ವಿಜಯ್ ಎಂಬುವರಿಗೆ ದೂರವಾಣಿ ಕರೆ ಮೂಲಕ ನಮಗೆ ಐದು ಕೆ.ಜಿ ಬಂಗಾರದ ನಾಣ್ಯಗಳು ಸಿಕ್ಕಿದ್ದು, ಅರ್ಧ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ನಂಬಿಸಿ ಡಿ.ಹಿರೇಹಾಳ್ ಬಳಿ ಕರೆಸಿಕೊಂಡು 8 ಲಕ್ಷ ಎರಡು ಮೊಬೈಲ್ ಫೋನ್ ಸಮೇತ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಿತರು ರಾಂಪುರ ಠಾಣೆಯಲ್ಲಿ 11-12-23 ರಂದು ಇಬ್ಬರು ಆರೋಪಿಗಳ ವಿರುದ್ದ ದೂರು ದಾಖಲಿಸಿದ್ದು, ದೂರು ದಾಖಲಿಸಿಕೊಂಡ ರಾಂಪುರ ಪೊಲೀಸರು ಆರೋಪಿಗಳ ಪತ್ತೆ ಕಾರ್ಯ ಆರಂಭಿಸಿ ಪ್ರಮುಖ ಆರೋಪಿಗಳಾದ ಕೂಡ್ಲಿಗಿಯ ಹನುಮಂತಪ್ಪನನ್ನು ಬಂಧಿಸಿ ಆತನಿಂದ 7 ಲಕ್ಷದ 70ಸಾವಿರ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೋರ್ವ ಆರೋಪಿ ಸಂಡೂರಿನ ರಾಮಾಂಜನೇಯ@ ಸಿರಿಕುಳ್ಳಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದ ಪಿಎಸ್ ಐಗಳಾದ ಮಹೇಶ್ ಹೊಸಪೇಟೆ, ಮತ್ತು ಪರುಶುರಾಂ ಲಮಾಣಿ ಮತ್ತು ಸಿಬ್ಬಂದಿ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.