ನಟ ವಿಕ್ಕಿ ಕೌಶಲ್ ಮತ್ತುರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ಅಭಿನಯಿಸಿರುವ ‘ಛಾವ’ ಸಿನಿಮಾ ಸೂಪರ್ ಹಿಟ್ ಆಗಿದೆ. ಫೆಬ್ರವರಿ 14ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ಐತಿಹಾಸಿಕ ಕಥೆಯನ್ನು ಆಧರಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಛಾವಾ ಚಿತ್ರ ರೀಲಿಸ್ ಆದ ನಾಲ್ಕೆ ದಿನಕ್ಕೆ ಈ ಸಿನಿಮಾ ಬರೋಬ್ಬರಿ 160 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಸೂಪರ್ ಹಿಟ್ ಎನಿಸಿಕೊಂಡಿದೆ. ಆ ಮೂಲಕ ಭಾರತೀಯ ಚಿತ್ರರಂಗದಲ್ಲಿ 100 ಕೋಟಿ ಕಲೆಕ್ಷನ್ ದಾಟಿದ ಚಿತ್ರಗಳ ಪೈಕಿ ಛಾವಾ ಚಿತ್ರವು ಸೇರಿದಂತಾಗಿದೆ.
ಛಾವಾ ಚಲನಚಿತ್ರ ಮೂಲತಃ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪುತ್ರ ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನ ಚರಿತ್ರೆಯನ್ನು ಆಧರಿಸಿದ್ದಾಗಿದೆ. ಲಕ್ಷಣ ಉಟೇಕರ್ ಚಿತ್ರಕಥೆ ಬರೆದು ನಿರ್ದೇಶಿದ ಚಿತ್ರ ಇದಾಗಿದ್ದು, ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಖ್ಯಾತ ನಟ ಅಜಯ್ ದೇವಗನ್ ಹಿನ್ನಲೆ ಧ್ವನಿ ನೀಡಿದ್ದಾರೆ. ಎ. ಆರ್. ರೆಹಮಾನ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.


