Freedom tv desk : ಚಂದನ್ ಶೆಟ್ಟಿ ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ರ್ಯಾಪ್ ಹಾಡೊಂದನ್ನು ಬಿಡುಗಡೆ ಮಾಡುವುದು ಚಂದನ್ ಅವರಿಗೆ ವಾಡಿಕೆ .ಅದರಂತೆ ಇದೀಗ ಹೊಸ ಹಾಡೊಂದನ್ನು ಚಂದನ್ ಶೆಟ್ಟಿ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ.

ಕನ್ನಡದ ಜನಪ್ರಿಯ ರ್ಯಾಪ್ರ್ಗಳಲ್ಲಿ ಪ್ರಮುಖರು . ಕಾಲ-ಕಾಲಕ್ಕೆ ಹೊಸ ಹಾಡುಗಳೊಟ್ಟಿಗೆ ಜನರ ಮುಂದೆ ಬರುತ್ತಲೇ ಇರುತ್ತಾರೆ. ಸಿನಿಮಾಗಳಿಗೂ ಸಂಗೀತ ನೀಡಿರುವ ಚಂದನ್ ಶೆಟ್ಟಿ, ಇದೀಗ ನಟನಾಗಿಯೂ ಅದೃಷ್ಟ ಪರೀಕ್ಷೆಗೆ ಹೊಸದೊಂದು ರ್ಯಾಪ್ ಹಾಡಿನೊಂದಿಗೆ ಚಂದನ್ ಶೆಟ್ಟಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಟಪಾಂಗುಚಿ ಮಾದರಿಯ ಹಾಡೊಂದನ್ನು ಚಂದನ್ ಶೆಟ್ಟಿ ಬಿಡುಗಡೆ ಮಾಡಿದ್ದು, ಹಾಡಿನಲ್ಲಿ ರಂಗಾಯಣ ರಘು ಸಹ ಇದ್ದಾರೆ. ಜೊತೆಗೆ ಗಿಚ್ಚಿ ಗಿಲಿಗಿಲಿ ಕಲಾವಿದರೂ ಸಹ ಭಾಗವಹಿಸಿದ್ದಾರೆ.
ಚಂದನ್ ಶೆಟ್ಟಿಯವರ ಹಾಡುಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಪ್ರತಿ ಬಾರಿಯಂತೆ ಈ ಬಾರಿ ಸಹ ಡಿಸೆಂಬರ್ ತಿಂಗಳಿನಲ್ಲಿ ಚಂದನ್ ಶೆಟ್ಟಿ ಹೊಸದೊಂದು ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ.’ ವಾಟ್ ಡೂ ಮಾಮ’ ಎಂದು ಪ್ರಾರಂಭವಾಗುವ ಅಪ್ಪಟ ದೇಸಿ ಶೈಲಿಯ ಟಪಾಂಗುಚಿ ಹಾಡನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದಾರೆ.
ಯುವಕರ ಪ್ರಾಬ್ಲಮ್ ಗಳನ್ನು ಬಿಂಬಿಸುವ ಹಾಡು ಇದಾಗಿದ್ದು ಪ್ರಾಬ್ಲಮ್ ಪ್ರಾಬ್ಲಮ್ ಪ್ರಾಬ್ಲಮ್ ವಾಟ್ ಡು ಮಾಮ ? ಎಂದೇ ಹಾಡು ಆರಂಭವಾಗುತ್ತದೆ. ಇಷ್ಟು ದಿನ ಬಿಡುಗಡೆಯಾಗಿರುವ ಚಂದನ್ ಶೆಟ್ಟಿ ಅವರ ರ್ಯಾಪ್ ಹಾಡುಗಳು ಹೆಚ್ಚಾಗಿ ಆಧುನಿಕ ಜೀವನ ಶೈಲಿಯ ಮೇಲೆ, ಸ್ವಾಗ್ ಮೇಲೆ ಕೇಂದ್ರೀಕೃತವಾಗಿತ್ತು. ಆದರೆ ಈ ಹಾಡು ಪಕ್ಕಾ ಲೋಕಲ್ ಶೈಲಿಯಲ್ಲಿ ಮೂಡಿಬಂದಿದೆ.
ಚಂದನ್ ಶೆಟ್ಟಿ ಈ ಹಾಡಿನಲ್ಲಿ ಪಕ್ಕಾ ಲೋಕಲ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಟ ರಂಗಾಯಣ ರಘು ಅವರು ಚಂದನ್ ಶೆಟ್ಟಿ ಅವರ ಸೋದರಮಾವನ ಪಾತ್ರದಲ್ಲಿ ನಟಿಸಿದ್ದಾರೆ. ಜನಪ್ರಿಯ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿಯ ಕಲಾವಿದರಾದ ರಾಘವೇಂದ್ರ ಆರ್ ಜೆ ವಿಕ್ಕಿ ಹುಲಿ ಕಾರ್ತೀಕ್ , ನಿತಿನ್ ಅಮಿನ್, ಶಿಡ್ ಶ್ಯಾಡೋ ಶಿವ, ಎನ್ ಸಿ ಅಯ್ಯಪ್ಪ ಮುಂತಾದವರು ಈ ಅದ್ದೂರಿ ರ್ಯಾಪ್ ಸಾಂಗ್ನಲ್ಲಿ ಕಾಣಿಸಿಕೊಂಡ್ಡಿದ್ದಾರೆ.
ಇದೇ ಮೊದಲ ಬಾರಿಗೆ ಚಂದನ್ ಶೆಟ್ಟಿ ಅವರು ತಮ್ಮ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ವಿಜಯ್ ಈಶ್ವರ್ ಅವರ ಜೊತೆಗೂಡಿ ಹಾಡನ್ನು ಬರೆದಿದ್ದಾರೆ. ರಿಯಾಲಿಟಿ ಶೋನಲ್ಲಿ ಜನಪ್ರಿಯರಾಗಿರುವ ಮುರುಗ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.