Friday, August 22, 2025
24.8 C
Bengaluru
Google search engine
LIVE
ಮನೆಸಿನಿಮಾಕ್ಯಾಂಡಿಕ್ರಶ್ ಸೆಟ್‌ನಲ್ಲಿ ಚಂದನ್ ಶೆಟ್ಟಿ- ನಿವೇದಿತಾ ಗೌಡ ವೆಡ್ಡಿಂಗ್ ಆನಿವರ್ಸರಿ

ಕ್ಯಾಂಡಿಕ್ರಶ್ ಸೆಟ್‌ನಲ್ಲಿ ಚಂದನ್ ಶೆಟ್ಟಿ- ನಿವೇದಿತಾ ಗೌಡ ವೆಡ್ಡಿಂಗ್ ಆನಿವರ್ಸರಿ

ಶ್ರೀಚೌಡೇಶ್ವರಿ ಸಿನಿ ಕಂಬೈನ್ಸ್ ಮೂಲಕ ಮೋಹನ್ ಕುಮಾರ್ ಅವರು ನಿರ್ಮಿಸುತ್ತಿರುವ “ಕ್ಯಾಂಡಿ ಕ್ರಷ್” ಚಿತ್ರದಲ್ಲಿ ಜನಪ್ರಿಯ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ಮೊದಲಬಾರಿಗೆ ಒಟ್ಟಿಗೇ ನಟಿಸುತ್ತಿದ್ದಾರೆ.

ಪುನೀತ್ ಅವರ ಕಥೆ ಚಿತ್ರಕಥೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದು, ಭರದಿಂದ ಶೂಟಿಂಗ್ ಸಾಗಿದೆ, ಸದ್ಯ ಈ ಚಿತ್ರದ ರೊಮ್ಯಾಂಟಿಕ್ ಹಾಡೊಂದರ ಚಿತ್ರೀಕರಣ ವಿಜಯನಗರದ ಶೂಟಿಂಗ್ ಮನೆಯೊಂದರಲ್ಲಿ ನಡೆಯುತ್ತಿದೆ.

ಇದೇ ಸಂದರ್ಭದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ಅವರ ವೆಡ್ಡಿಂಗ್ ಆನಿವರ್ಸರಿ ಕೂಡ ಬಂದಿದ್ದು, ಚಿತ್ರತಂಡ ಈ ರೊಮ್ಯಾಂಟಿಕ್ ಹಾಡನ್ನು ಆನಿವರ್ಸರಿ ಗಿಫ್ಟ್ ಆಗಿ ನೀಡೋ ಮೂಲಕ ಈ. ಯುವಜೋಡಿಗೆ ಶುಭ ಕೋರಿದೆ.

ತಮ್ಮ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಚಿತ್ರತಂಡದ ಜೊತೆಗೇ ವೆಡ್ಡಿಂಗ್ ಆನಿವರ್ಸರಿ ಸಂಭ್ರಮವನ್ನು ಸೆಲೆಬ್ರೇಟ್ ಮಾಡಿಕೊಳ್ಳುತ್ತಿರುವ ಬಗ್ಗೆ ಸಂತಸಗೊಂಡಿರುವ ನಾಯಕನಟ ಚಂದನ್ ಶೆಟ್ಟಿ ನಮ್ಮಿಬ್ಬರ ಮದುವೆ ವಾರ್ಷಿಕೋತ್ಸವದ ದಿನವೇ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್ ನಡೆಯುತ್ತಿದೆ, ಇಷ್ಟು ಜನರ ಮಧ್ಯೆ ನಮ್ಮ ಆನಿವರ್ಸರಿ ಸೆಲಬ್ರೇಟ್ ಮಾಡಿಕೊಳ್ಳುತ್ತಿರುವುದಕ್ಕೆ ನಮಗೆ ನಿಜಕ್ಕೂ ತುಂಬಾ ಖುಷಿಯಾಗ್ತಿದೆ ಎಂದು ಹೇಳಿದ್ದಾರೆ. ಕ್ಯಾಂಡಿ ಕ್ರಷ್ ವಿಭಿನ್ನ ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು ಚಿತ್ರದ ಶೀರ್ಷಿಕೆಯೇ ವಿಶೇಷವಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments