ಹುಬ್ಬಳ್ಳಿ : ಗ್ರಾಮದಲ್ಲಿ ಆಡಳಿತ ಅಧಿಕಾರಿ ಕಾರ್ಯಲಯ ಕಟ್ಟಡ ಕುಸಿದ ಬಿದ್ದ ಹಿನ್ನಲೆಯಲ್ಲಿ, ಚಾಕಲಬ್ಬಿ ಗ್ರಾಮದ ಬಸ್ ನಿಲ್ದಾಣವೇ ಈಗ ಗ್ರಾಮಲೇಕ್ಕಾಧಿಕಾರಿಯ ಕಾರ್ಯಾಲಯವಾಗಿ ಮಾರ್ಪಾಡಾಗಿದೆ. ಹೌದು ಗ್ರಾಮ ಆಡಳಿತ ಅಧಿಕಾರಿ ಗ್ರಾಮಸ್ಥರ ಕೆಲಸಗಳನ್ನು ಬಸ್ ನಿಲ್ದಾಣದಲ್ಲಿ ಮಾಡಿಕೊಡುವ ಸ್ಥಿತಿ ನಿರ್ಮಾಣವಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ಐದಾರು ವರ್ಷಗಳ ಹಿಂದೆಯೇ ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯದ ಮೇಲಚ್ಚಾವಣಿ ಕುಸಿದು ಬಿದಿತ್ತು.
ಅಂದಿನಿಂದ ಈಗಿನವರೆಗೂ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಈಗ ಪಾಳು ಬಿದಿದೆ. ಅನಿವಾರ್ಯವಾಗಿ ಗ್ರಾಮದ ಆಡಳಿತ ಅಧಿಕಾರಿ ದಿನೇಶ ಈಗ ಬಸ್ ನಿಲ್ದಾಣದಲ್ಲಿ ಗ್ರಾಮಸ್ಥರ ಕೆಲಸ ಮಾಡಿಕೊಡುವಂತಾಗಿದೆ. ಗ್ರಾಮದ ತಲಾಟಿಯವರ ಸ್ಥಿತಿ ನೋಡಿದ ಗ್ರಾಮಸ್ಥರು ಜಿಲ್ಲಾಡಳಿತ, ಕಂದಾಯ ಇಲಾಖೆಯ ಅಧಿಕಾರಿಗಳ ಸೇರಿ ಕಂದಾಯ ಇಲಾಖೆಯ ಸಚಿವ ಕೃಷ್ಣ ಬಲಭೈರೇಗೌಡರ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ಇನ್ನೂ ಈ ಸಮಸ್ಯೆಯ ಕುರಿತು ಈಗಾಗಲೇ ಜಿಲ್ಲಾ ಅಧಿಕಾರಿಗೆ, ತಹಶಿಲ್ದಾರ ಕಚೇರಿಗೆ ಜೊತೆಗೆ ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡರಿಗೆ ಗ್ರಾಮಸ್ಥರು ಮನವಿ ನೀಡಿದ್ದಾರೆ. ಆದರೂ ಯಾವುದೇ ಪ್ರಯೋಜನ ಆಗಿಲ್ವಂತೆ.
ಈಗ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಮಾಡುತ್ತಿದ್ದೇವೆ. ನಮ್ಮ ಗ್ತಾಮಕ್ಕೆ ತಲಾಟಿ ಕಾರ್ಯಾಲಯ ನಿರ್ಮಿಸಿ, ಅಲ್ಲಿಯವರೆಗೆ ಗ್ರಾಮ ಆಡಳಿತ ಅಧಿಕಾರಿಗೆ ಬದಲಿ ವ್ಯವಸ್ಥೆ ಮಾಡಿಸಿಕೊಡಲು ಒತ್ತಾಯ ಮಾಡುತ್ತಿದ್ದಾರೆ. ಇಲ್ಲವಾದಲ್ಲಿ ನಮ್ಮ ಗ್ರಾಮಕ್ಕೆ ಗ್ರಾಮಡಾಳಿತ ಕಾರ್ಯಾಲಯ ನಿರ್ಮಾಣ ಮಾಡುವವರೆಗೂ ಬರುವ ದಿನಗಳಲ್ಲಿ ಹೋರಾಟ ಆರಂಭ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.