#Exclusive NewsTop Newsವೈರಲ್ ನ್ಯೂಸ್ಸಿನಿಮಾಸುದ್ದಿ

ಹಾಟ್ ಅವತಾರದಲ್ಲಿ ‘ಸಪ್ತ ಸಾಗರದಾಚೆ’ ಸುಂದರಿ: ಫೋಟೋಗಳು ವೈರಲ್

ಸಪ್ತಸಾಗರದಾಚೆ ಎಲ್ಲೋ, ಟೋಬಿ ಬೆಡಗಿ ಚೈತ್ರಾ ಆಚಾರ್ (Chaithra Achar) ಇದೀಗ ಹಾಟ್ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಸಖತ್ ಬೋಲ್ಡ್​ ಆಗಿ ಚೈತ್ರಾ ಆಚಾರ್ ಫೋಟೋ ಶೂಟ್​ ಮಾಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಚೈತ್ರಾ ಹಾಟ್ ಲುಕ್​ನಲ್ಲಿ ಕಾಣಿಸಿಕೊಂಡಿರೋದು ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವುದು ಸುಳ್ಳಲ್ಲ.

 

ನಟಿ ಚೈತ್ರಾ ಆಚಾರ್ ಸಖತ್ ಬೋಲ್ಡ್ ಆಗಿರೋ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಲಾಂಗ್ ಬ್ಲ್ಯಾಕ್ ಡ್ರೆಸ್‌ ಧರಿಸಿ ವಿವಿಧ ಭಂಗಿಯಲ್ಲಿ ಚೈತ್ರಾ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ. ನಟಿಯ ಹಾಟ್, ಸೆಕ್ಸಿ, ಬ್ಯೂಟಿಫುಲ್ ಅವತಾರಕ್ಕೆ ಪಡ್ಡೆ ಹುಡುಗರು ಫುಲ್ ಫಿದಾ ಆಗಿದ್ದಾರೆ.

ಈ ಹಿಂದೆ ರವಿಕೆ ಧರಿಸಿದೇ ಸೀರೆಯುಟ್ಟು ಫೋಟೋಗೆ ಫೋಸ್ ಕೊಟ್ಟಿದ್ದ ನಟಿ ಚೈತ್ರಾ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದ್ದರು. ‘ಸಪ್ತಸಾಗರದಾಚೆ ಎಲ್ಲೋ’, ‘ಟೋಬಿ’ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಚೈತ್ರಾ ಆಚಾರ್‌ 2019ರಲ್ಲಿ ‘ಮಹಿರಾ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅಲ್ಲದೆ, ಕನ್ನಡದ ಹಲವು ಸಿನಿಮಾಗಳಲ್ಲೂ ಚೈತ್ರಾ ನಟಿಸಿದ್ದಾರೆ.

Comments (0)

Your email address will not be published. Required fields are marked *

Back to top button