
ಬೆಂಗಳೂರು: ಕಾವೇರಿಯ ನದಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ವಾರಣಾಸಿ ಮಾದರಿಯಲ್ಲೇ ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ನಲ್ಲಿ ಗಂಗಾರತಿಯನ್ನು ಆಯೋಜಿಸಲಿದೆ.
ಮಾರ್ಚ್ 21ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ಈಗಾಗಲೇ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಜಲಮಂಡಳಿ, ಕಾರ್ಯಕ್ರಮದಲ್ಲಿ ಬಿಡಬ್ಲ್ಯೂಎಸ್ಎಸ್ಬಿ ಉದ್ಯೋಗಿಗಳ ಕುಟುಂಬಗಳು ಸೇರಿದಂತೆ 10,000ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಬೆಂಗಳೂರಿನ ಶೇ. 70ರಷ್ಟು ಜನರಿಗೆ ಕಾವೇರಿ ನೀರು ಪ್ರಮುಖ ನೀರಿನ ಮೂಲವಾಗಿದ್ದು, ನಗರಕ್ಕೆ ಪ್ರತಿದಿನ 2,225 ಮಿಲಿಯನ್ ಲೀಟರ್ ನೀರನ್ನು ಪೂರೈಸುತ್ತಿದೆ.
ಇನ್ನು ಈ ಕಾರ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.




