Top Newsರಾಜ್ಯಸುದ್ದಿ

ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದ ಕಾರು: ಓರ್ವ ಸಾವು, ಇಬ್ಬರು ನಾಪತ್ತೆ

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಕಾರು ಬಿದ್ದು ಓರ್ವ ವ್ಯಕ್ತಿ ಸಾವಪ್ಪಿರುವಂತಹ ಘಟನೆ ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಗ್ರಾಮದ ಬಳಿ ನಡೆದಿದೆ.

ಕಾರು ಮಾಲೀಕ ಫಯಾಜ್ ಅಲಿಯಾಸ್‌ ಬ್ಯಾಟರಿ ಸಾವನ್ನಪ್ಪಿದ್ದು, ಅಸ್ಲಂ ಪಾಷ, ಪೀರ್ ಖಾನ್ ನಾಪತ್ತೆಯಾಗಿದ್ದಾರೆ. ಕಾರಿನಲ್ಲಿದ್ದ ನಯಾಜ್ ಎಂಬಾತನನ್ನ ರಕ್ಷಣೆ ಮಾಡಲಾಗಿದೆ. ಕಾರಿನಲ್ಲಿದ್ದ ನಾಲ್ವರು ಮಂಡ್ಯದ ಹಾಲಹಳ್ಳಿ ಸ್ಲಂನ ನಿವಾಸಿಗಳು ಎಂದು ಹೇಳಲಾಗಿದೆ.

ಶಿವಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳೀಯರ ಸಹಾಯದಿಂದ ಪೊಲೀಸರು ಕಾರನ್ನು ಮೇಲೆತ್ತಿದ್ದಾರೆ. ನಾಲೆಗೆ ತಡೆಗೋಡೆ ಇಲ್ಲದ ಕಾರಣ ದುರಂತರ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ತಡೆಗೋಡೆ ಇಲ್ಲದ ಕಾರಣ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇ ಪದೇ ವಿಸಿ ನಾಲೆಗೆ ಕಾರು, ಬಸ್ ಬೀಳ್ಳುತ್ತಿವೆ. ಹೀಗಿದ್ದರೂ ತಡೆಗೋಡೆ ಮಾತ್ರ ಹಾಕುತ್ತಿಲ್ಲ. ಜನರ ಪ್ರಾಣಕ್ಕೆ ಇವರ ಬಳಿ ಬೆಲೆ ಇಲ್ಲ ಎಂದು ಸರ್ಕಾರಕ್ಕೆ ಜನರು ಇಡಿ ಶಾಪ ಹಾಕುತ್ತಿದ್ದಾರೆ.

ಓವರ್‌ಟೇಕ್ ಮಾಡುವ ವೇಳೆ ಈ ಘಟನೆ ಜರುಗಿದೆ. ಸದ್ಯ ಅಗ್ನಿಶಾಮಕದಳದೊಂದಿಗೆ ಕಾರ್ಯಾಚರಣೆ ನಡೆಯುತ್ತಿದೆ. ನೀರು ಹೆಚ್ಚಿರುವ ಕಾರಣ ಕಾರ್ಯಾಚರಣೆ ಕಷ್ಟವಾಗುತ್ತಿದೆ. ನೀರನ್ನು ನಿಲ್ಲಿಸಲು ನೀರಾವರಿ ಇಂಜಿನಿಯರ್‌ಗೆ ತಿಳಿಸಿದ್ದೇವೆ. ಕೆಲವೊಂದು ಕಡೆ ತಡೆಗೋಡೆ ಇದೆ, ಕೆಲವು ಕಡೆ ಈಗ ನಿರ್ಮಾಣವಾಗುತ್ತಿದೆ. ಇನ್ನೂ ಕೆಲವೆಡೆ ತಡೆಗೋಡೆ ನಿರ್ಮಾಣವಾಗಿಲ್ಲ ಎಂದು ತಿಳಿಸಿದ್ದಾರೆ.

 

Comments (0)

Your email address will not be published. Required fields are marked *

Back to top button