Freedom TV

ಮಂಡ್ಯದ ವಿಸಿ ನಾಲೆಗೆ ಬಿದ್ದ ಕಾರು: ಪ್ರಾಣಾಪಾಯದಿಂದ ಚಾಲಕ ಪಾರು

ಮಂಡ್ಯ: ವಿಸಿ ನಾಲೆಗೆ ಕಾರೊಂದು ಬಿದ್ದಿದ್ದು, ಕಾರು ಚಾಲಕ ಕೃಷ್ಣ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಡ್ಯ ಜಿಲ್ಲೆಯ ಬಿ. ಯರಹಳ್ಳಿ ಬಳಿ ಇರುವ ವಿಸಿ ನಾಲೆಯಲ್ಲಿ ನಡೆದಿದೆ..

ಕಾರು ನಾಲಗೆ ಬಿದ್ದ ತಕ್ಷಣ ಚಾಲಕ ಸಮಯಪ್ರಜ್ಞೆ ಯಿಂದ ಕಾರಿನ ಡೋರ್​​​​​​​​​ ತೆರೆದು ಹೊರಬಂದಿದ್ದಾರೆ.. ಬೆಳಗಿನ ಜಾವ 4:30ರ ಸುಮಾರಿಗೆ ಘಟನೆ ಸಂಭವಿಸಿದೆ. ಮಂಡ್ಯದ ಕಲ್ಲಹಳ್ಳಿ ನಿವಾಸಿ ಕೃಷ್ಣ ಎಂಬವರು ಕ್ರೇಟಾ ಕಾರು ಚಲಾಯಿಸುತ್ತಿದ್ದರು. ಕಿರಿದಾದ ರಸ್ತೆ, ತಡೆಗೋಡೆ ಇಲ್ಲದ ಕಾರಣ ಅವಘಡ ಸಂಭವಿಸಿದೆ. ಕಾರು ನಾಲೆಗೆ ಬೀಳುತ್ತಿದ್ದಂತೆ ಚಾಲಕ ಕೃಷ್ಣ ಕಾರಿನಿಂದ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ನಾಲೆಗೆ ಬಿದ್ದಿದ್ದ ಕಾರನ್ನು ಮೇಲಕ್ಕೆತ್ತಿದ್ದಾರೆ.

Comments (0)

Your email address will not be published. Required fields are marked *

Back to top button