ರಾಂಚಿ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ಕೊಟ್ಟಿದ್ದ ಸ್ವೀಟ್ ವಾರ್ನಿಂಗ್ ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ರನ್ನು ಅಪಾಯದಿಂದ ಪಾರು ಮಾಡಿದೆ. ಹೇಗೆ ಅಂತೀರಾ.. ಈ ಸ್ಟೋರಿ ನೋಡಿ
ರಾಂಚಿ ಟೆಸ್ಟ್ ಪಂದ್ಯದ ವೇಳೆ ಯುವ ಆಟಗಾರ ಸರ್ಫರಾಜ್ ಖಾನ್ ಮೇಲೆ ಕ್ಯಾಪ್ಟನ್ ರೋಹಿತ್ ಶರ್ಮಾ ಸ್ವಲ್ಪ ಸೀರಿಯಸ್ ಆಗಿದ್ರು. ಹೆಲ್ಮೆಟ್ ಧರಿಸದೇ ಸಿಲ್ಲಿ ಪಾಯಿಂಟ್ನಲ್ಲಿ ಫೀಲ್ಡಿಂಗ್ಗೆ ನಿಂತ ಸರ್ಫರಾಜ್ಗೆ ರೋಹಿತ್ ಶರ್ಮಾ ಕ್ಲಾಸ್ ತೆಗೆದುಕೊಂಡಿದ್ರು. ಏನು ಹೀರೋ ಆಗ್ಬೇಕು ಅಂದ್ಕೊಂಡಿದ್ದೀಯಾ ಎಂದು ಸ್ವೀಟ್ ವಾರ್ನಿಂಗ್ ಕೊಟ್ಟಿದ್ರು. ಅಲ್ಲದೇ, ಶ್ರೀಕರ್ ಭರತ್ ಮೂಲಕ ಹೆಲ್ಮೆಟ್ ತರಿಸಿ ಸರ್ಫರಾಜ್ಗೆ ಕೊಟ್ಟಿದ್ರು.
Rohit Sharma stops Sarfaraz Khan from doing fielding at point without helmet by saying Jada hero nahi banneka (Don't Try to be hero)
Rohit Sharma take cares of his team like family ❤️#INDvENGpic.twitter.com/J6hcWdRGSI
— Ctrl C Ctrl Memes (@Ctrlmemes_) February 25, 2024
ರಾಂಚಿ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ಕೊಟ್ಟಿದ್ದ ಸ್ವೀಟ್ ವಾರ್ನಿಂಗ್ ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ರನ್ನು ಅಪಾಯದಿಂದ ಪಾರು ಮಾಡಿದೆ.
ನಡೆದಿದ್ದೇನು?
ಧರ್ಮಶಾಲಾ ಟೆಸ್ಟ್ನ ಎರಡನೇ ಇನ್ನಿಂಗ್ಸ್ನ 38ನೇ ಓವರ್ನಲ್ಲಿ ಕುಲ್ದೀಪ್ ಯಾದವ್ ಬೌಲಿಂಗ್ ವೇಳೆ ಸರ್ಫರಾಜ್ ಖಾನ್ ಶಾರ್ಟ್ ಲೆಗ್ ಪೊಸಿಷನ್ನಲ್ಲಿ ಫೀಲ್ಡಿಂಗ್ ಮಾಡಿದ್ರು.
ಆ ಓವರ್ನ ಮೂರನೇ ಎಸೆತವನ್ನು ಬ್ಯಾಟರ್ ಶೊಯೇಬ್ ಬಷೀರ್ ಲೆಗ್ ಸೈಡ್ ಕಡೆ ಬಲವಾಗಿ ಫ್ಲಿಕ್ ಮಾಡಿದರು. ಚೆಂಡು ನೇರವಾಗಿ ಸರ್ಫರಾಜ್ ಹೆಲ್ಮೆಟ್ಗೆ ಬಲವಾಗಿ ಬಂದು ಹೊಡೆಯಿತು.
And that’s why Rohit Bhai said “Hero banne ki zaroorat naheen hai” pic.twitter.com/41tsvFUXrg
— Vishal Misra (@vishalmisra) March 9, 2024
ಹೆಲ್ಮೆಟ್ ಇದ್ದ ಕಾರಣ ಸರ್ಫರಾಜ್ ಅಪಾಯದಿಂದ ಪಾರಾದರು..ಒಂದೊಮ್ಮೆ ಹೆಲ್ಮೆಟ್ ಇಲ್ಲ ಎಂದಿದ್ರೆ ಸರ್ಫರಾಜ್ಗೆ ತೀವ್ರ ಸ್ವರೂಪದ ಗಾಯ ಆಗ್ತಿತ್ತು.
ಈ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ರೋಹಿತ್ ಶರ್ಮಾ ಸ್ವೀಟ್ ವಾರ್ನಿಂಗ್ ಅನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಇದನ್ನು ಓದಿ
https://freedomtvlive.com/2024/02/25/ind-vs-eng-fourth-test-videos-goes-viral/