Big boss 10 : ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ 11ನೇ ವಾರ ಕ್ಯಾಪ್ಟನ್ ಪಟ್ಟಕ್ಕೇರಿದ್ದಾರೆ ನಮ್ರತಾ. ಎರಡು ವಾರಗಳಿಂದ ಕ್ಯಾಪ್ಟನ್ ಕೋಣೆಗೆ ಬೀಗ ಜಡಿಯಲಾಗಿತ್ತು. ಇದೀಗ ಕ್ಯಾಪ್ಟನ್ ಆಗಿರುವ ನಮ್ರತಾ ಕ್ಯಾಪ್ಟನ್ ಕೋಣೆಯನ್ನು ತೆರೆದಿದ್ದಾರೆ.

ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ 11ನೇ ವಾರ ಕ್ಯಾಪ್ಟನ್ ಪಟ್ಟಕ್ಕೇರಿದ್ದಾರೆ ನಮ್ರತಾ. ಎರಡು ವಾರಗಳಿಂದ ಕ್ಯಾಪ್ಟನ್ ಕೋಣೆಗೆ ಬೀಗ ಜಡಿಯಲಾಗಿತ್ತು. ಇದೀಗ ಕ್ಯಾಪ್ಟನ್ ಆಗಿರುವ ನಮ್ರತಾ ಕ್ಯಾಪ್ಟನ್ ಕೋಣೆಯನ್ನು ತೆರೆದಿದ್ದಾರೆ. ಪಾಯಿಂಟ್ಸ್ಗಾಗಿ ಕಿತ್ತಾಟ ನಡೆಯುತ್ತಿದ್ದಾಗ , ನಾನು ಹೋಪ್ಸ್ ಕಳೆದುಕೊಂಡಿದ್ದೇನೆ. ನಾವು ಎಷ್ಟೇ ಚೆನ್ನಾಗಿ ಆಡಿದರೂ ಕ್ಯಾಪ್ಟನ್ ರೇಸ್ಗೆ ಬರೋಕೆ ಸಾಧ್ಯವಿಲ್ಲ. ಕೇವಲ ಮಾಲೀಕರ ಬೇಸ್ ಪ್ರೈಸ್ನಿಂದಾಗಿ ಮೂವರು ಕ್ಯಾಪ್ಟನ್ಸಿ ರೇಸ್ಗೆ ಅರ್ಹತೆ ಪಡೆದಿದ್ದಾರೆ ಎಂದು ಪದೇ ಪದೇ ಹೇಳಿ ನಮ್ರತಾ ಬೇಸರ ಮಾಡಿಕೊಂಡಿದ್ದರು.

ಕಣ್ಣೀರಿಟ್ಟಿದ್ದ ನಮ್ರತಾ
ತಮ್ಮ ತಂಡದ ಸೋಲಿನ ಬೀತಿಯಲ್ಲಿದ್ದಾಗ ನಮ್ರತಾ ಕಣ್ಣೀರಿಟ್ಟಿದ್ದರು. ನನಗೆ ಕ್ಯಾಪ್ಟನ್ಸಿ ಸಿಗಲ್ಲ , ಇಲ್ಲಿಗೆ ಮುಗೀತು. ಪಾಯಿಂಟ್ಸ್ ಕೊಡಿ ಅಂತ ಕೇಳೋಕೆ ನನಗೆ ಬರಲ್ಲ. ಕನ್ವಿನ್ಸ್ ಮಾಡೋಕೂ ಬರಲ್ಲ. ನಾನು ಎಫಟ್ಸ್ ಹಾಕುತ್ತಿದ್ದರೂ, ಏನು ಆಗ್ತಿಲ್ಲ.
ನಮ್ರತಾ ಅವರನ್ನು ಸಂಗೀತ ಕ್ಯಾಪ್ಟನ್ಸಿಗೆ ಪುಶ್ ಮಾಡಲ್ಲ ಎಂದು ತನಿಷಾ, ವಿನಯ್ & ಟೀಮ್ ಭಾವಿಸಿದ್ದರು. ಆದರೆ, ನಮ್ರತಾ ಮೇಲೆ ಕೃಪೆ ತೋರಿ.. ಹೆಚ್ಚು ಪಾಯಿಂಟ್ಸ್ ಕೊಟ್ಟು ಕ್ಯಾಪ್ಟನ್ಸಿಗೆ ಸಂಗೀತಾ ಅವಕಾಶ ಮಾಡಿಕೊಟ್ಟರು. ವಾರಗಳ ಹಿಂದೆ ತಾವು ತಂಡದ ಕ್ಯಾಪ್ಟನ್ ಆಗಿದ್ದಾಗ ನಮ್ರತಾ ಅವರನ್ನ ಕ್ಯಾಪ್ಟನ್ಸಿ ರೇಸ್ನಿಂದ ಡ್ರೋನ್ ಪ್ರತಾಪ್ ಹೊರಗಿಟ್ಟಿದ್ದರು. ಆಗ ಬೇಸರ ಮಾಡಿಕೊಂಡು ನಮ್ರತಾ ಕಣ್ಣೀರು ಸುರಿಸಿದ್ದರು. ಬಳಿಕ ಆಟದಲ್ಲಿ ಚೆನ್ನಾಗಿ ಪರ್ಫಾಮ್ ಮಾಡಿ ಕಿಚ್ಚನ ಚಪ್ಪಾಳೆ, ಹಾಗೂ ಉತ್ತಮ ವನ್ನು ಪಡೆದಿದ್ದರು.

ಡ್ರೋನ್ ಪ್ರತಾಪ್ ತ್ಯಾಗ
ಕ್ಯಾಪ್ಟನ್ಸಿ ರೇಸ್ನಿಂದ ನಮ್ರತಾ ಅವರನ್ನು ಹೊರಗಿಟ್ಟಿದ್ದಕ್ಕೆ ಡ್ರೋನ್ ಪ್ರತಾಪ್ಗೆ ಗಿಲ್ಟ್ ಕಾಡುತ್ತಿತ್ತು. ಹೀಗಾಗಿ, ಈ ವಾರ ನಮ್ರತಾ ಅವರನ್ನ ಕ್ಯಾಪ್ಟನ್ಸಿ ರೇಸ್ಗೆ ಪುಶ್ ಮಾಡಿ ಹಳೇ ಗಿಲ್ಟ್ನಿಂದ ಡ್ರೋನ್ ಪ್ರತಾಪ್ ಹೊರಗೆ ಬಂದಿದ್ದಾರೆ. ನನಗೆ ಪಅಯಿಂಟ್ಸ್ ಬೇಡ ಎಂದು ಹೇಳಿ ..ನಮ್ರತಾಗೆ ಹೆಚ್ಚಿನ ಪಾಯಿಂಟ್ಸ್ ಸಿಗುವಂತೆ ಮಾಡಿ ನಮ್ರತಾರನ್ನ ಕ್ಯಾಪ್ಟನ್ಸಿ ರೇಸ್ಗೆ ಡ್ರೋನ್ ಪ್ರತಾಪ್ ತಿಳಿಸಿದರು.