ಬೀದರ್ : ಇಂದು ಗಡಿ ಜಿಲ್ಲೆ ಬೀದರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರವಾಸ ಕೈಗೊಳ್ಳಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಬೀದರ್‌ಗೆ ಆಗಮಿಸುತ್ತಿರೊ ಬಿವೈ ವಿಜಯೇಂದ್ರ.
ರಸ್ತೆ ಮೂಲಕ ಕಲಬುರಗಿಯಿಂದ ಬೀದರ್‌ಗೆ ಆಗಮಿಸಲಿರುವ ಅವರು ಬೂತ್ ಮಟ್ಟದ ಅಧ್ಯಕ್ಷರಾದ ಮೋವಿ ಸಮಾಜದ ಲಾಲಪ್ಪ ಮನೆಗೆ ಭೇಟಿ, ಉಪಹಾರ ಮಾಡಲಿದ್ದಾರೆ.
ಇನ್ನು, ಚಿಟ್ಟವಾಡಿಯ ನೂತನ ಬಸವೇಶ್ವರ, ಪುತ್ತಳಿಯನ್ನು ಉದ್ಘಾಟನೆ ಮಾಡಲಿದ್ದು, 12 ಗಂಟೆ ಸುಮಾರಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಯಲಿದೆ. ನಂತರ ಗಣೇಶ್ ಮೈದಾನದಲ್ಲಿ ಆಯೋಜಿಸಿರುವ ಬಿಜೆಪಿ ಸಮಾರಂಭದಲ್ಲಿ ಭಾಗಿಯಾಗಲಿದ್ದು, ಸಭೆಯಲ್ಲಿ ನೂತನ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ, ವಿಜಯೇಂದ್ರ ಅಭಿನಂದನಿಸಿ ಸನ್ಮಾನವನ್ನು ಮಾಡಲಿದ್ದಾರೆ.