Tuesday, June 24, 2025
25.9 C
Bengaluru
Google search engine
LIVE
ಮನೆ#Exclusive NewsTop Newsಮೋಜು-ಮಸ್ತಿಗೆ ಮನೆಗಳ್ಳತನ : ನಟಿಗೆ 3 ಕೋಟಿ ಬೆಲೆಯ ಮನೆ ಗಿಫ್ಟ್

ಮೋಜು-ಮಸ್ತಿಗೆ ಮನೆಗಳ್ಳತನ : ನಟಿಗೆ 3 ಕೋಟಿ ಬೆಲೆಯ ಮನೆ ಗಿಫ್ಟ್

ಬೆಂಗಳೂರು: ದೇಶದ್ಯಾಂತ ಐಷಾರಾಮಿ ಮನೆಗಳನ್ನು ಟಾರ್ಗೆಟ್ ಮಾಡಿ, ಕಳ್ಳತನ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳನನ್ನು ಬೆಂಗಳೂರಿನ ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

ಇನ್ನು ಬಂಧಿತ ಆರೋಪಿಯನ್ನು ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ (37) ಎಂದು ಗುರುತಿಸಲಾಗಿದೆ.

ಪೊಲೀಸರ ವಿಚಾರಣೆ ವೇಳೆ, ಮನೆಗಳ್ಳತನದಿಂದ ಕೋಲ್ಕತ್ತಾದಲ್ಲಿ ಪ್ರೇಯಸಿಗೆ 3 ಕೋಟಿ ರೂ. ಬೆಲೆಬಾಳುವ ಮನೆ ಖರೀದಿಸಿ ಕೊಟ್ಟಿದ್ದ ಎಂಬ ವಿಷಯ ಬಯಲಾಗಿದೆ. ಅಷ್ಟೇ ಅಲ್ಲದೇ ಬಾಲಿವುಡ್ ಸೇರಿದಂತೆ ಪ್ರಖ್ಯಾತ ಸಿನಿಮಾ ನಟಿಯರ ಬಗ್ಗೆ ಕುಖ್ಯಾತ ಕಳ್ಳ ಮೋಹ ಬೆಳೆಸಿಕೊಂಡಿದ್ದ. ಅವರಿಗಾಗಿ ಕೋಟ್ಯಂತರ ರೂ. ಖರ್ಚು ಮಾಡಿ ಮೋಜು-ಮಸ್ತಿ ಮಾಡುತ್ತಿದ್ದ ಎಂದು ಹಲವು ಕುತೂಹಲಕಾರಿ ವಿಷಯಗಳು ಬೆಳಕಿಗೆ ಬಂದಿವೆ.

ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಆರೋಪಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಕಳೆದ ತಿಂಗಳ 9 ರಂದು ಬೆಂಗಳೂರಿನ ಮಡಿವಾಳದಲ್ಲಿ ಮನೆಗಳ್ಳತನ ಮಾಡಿ ಎಸ್ಕೇಪ್ ಆಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments