Tuesday, January 27, 2026
24.7 C
Bengaluru
Google search engine
LIVE
ಮನೆಜಿಲ್ಲೆಬೆಂಗಳೂರಿಗರಿಗೆ BWSSB ಬಿಗ್ ಶಾಕ್​..!

ಬೆಂಗಳೂರಿಗರಿಗೆ BWSSB ಬಿಗ್ ಶಾಕ್​..!

ಬೆಂಗಳೂರು: ಮೆಟ್ರೋ ಟಿಕೆಟ್‌, ಹಾಲಿನ ದರ, ಕರೆಂಟ್ ಬಿಲ್, ಡೀಸೆಲ್ ರೇಟ್‌ ಏರಿಕೆಯ ಬೆನ್ನಲ್ಲೇ ಸಿಲಿಕಾನ್ ಸಿಟಿ ಜನರಿಗೆ ಜಲಮಂಡಳಿ ಬಿಗ್ ಶಾಕ್ ಕೊಟ್ಟಿದೆ. ಪ್ರತಿ ಲೀಟರ್ ನೀರಿನ ದರ 7 ರಿಂದ 8 ಪೈಸೆಗೆ ಏರಿಕೆ ಮಾಡುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. BWSSB ಪರಿಷ್ಕೃತ ನೀರಿನ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರುತ್ತಿದೆ.

ಬೆಂಗಳೂರಲ್ಲಿ ಒಂದು ಲೀಟರ್ ಗೃಹ ಬಳಕೆಯ ನೀರಿಗೆ ಒಂದು ಪೈಸೆ ಹೆಚ್ಚಳ ಮಾಡಲಾಗಿದೆ. ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಡಾ.ರಾಮ್ ಪ್ರಸಾತ್ ಮನೋಹರ್, BWSSB ಚೇರ್​ಮನ್​

2014ರಿಂದ ನೀರಿನ ದರ ಏರಿಕೆ ಆಗಿಲ್ಲ. ಕಳೆದ 11 ವರ್ಷದ ಹಿಂದೆ ನೀರಿನ ದರ ಏರಿಕೆ ಆಗಿದೆ. 3 ಪಟ್ಟು ಕರೆಂಟ್ ಬಿಲ್ ಜಾಸ್ತಿ ಆಗಿದೆ. ನೀರು ಸರಬರಾಜಿನಲ್ಲಿ ಜಲ ಮಂಡಳಿಗೆ ಹೆಚ್ಚು ಎಲೆಕ್ಟ್ರಿಸಿಟಿ ಖರ್ಚು ತಗಲುತ್ತದೆ. ಆದಾಯಕ್ಕಿಂತ ಬರುವಂತಹ ಖರ್ಚು ಜಾಸ್ತಿ ಇದೆ.

ಬೆಂಗಳೂರಲ್ಲಿ ಕಾವೇರಿ 5ನೇ ಹಂತ ಆದ ಮೇಲೆ ತಿಂಗಳಿಗೆ ಸಾಕಷ್ಟು ಆದಾಯದ ಕೊರತೆ ಆಗ್ತಿದೆ. ವಾರ್ಷಿಕವಾಗಿ ಕೋಟ್ಯಾಂತರ ರೂಪಾಯಿ ನಷ್ಟ ಆಗುತ್ತೆ. ದರ ಏರಿಕೆ ಮಾಡಲು Bwssb 1994 ಕಾಯ್ದೆಯಂತೆ ಸಂಪೂರ್ಣ ಅಧಿಕಾರ ಇದೆ. ಬೋರ್ಡ್ ಮೆಂಬರ್ಸ್ ತುರ್ತಾಗಿ ಚರ್ಚೆ ಮಾಡಿ ನಿರ್ಣಯ ತೆಗೆದುಕೊಂಡಿದ್ದೇವೆ. ಈ ಪ್ರಸ್ತಾವನೆ ಪ್ರಕಾರ ಸಾರ್ವಜನಿಕರಿಗೆ ಸಾಕಷ್ಟು ಹೊಡೆತ ಆಗಬಾರದು ಅಂತ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನಿರ್ದೇಶನ ಕೊಟ್ಟಿದ್ದರು ಎಂದು ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ನೂತನ ನೀರಿನ ದರ ಜಾರಿಯಾಗುವುದರಿಂದ ಗೃಹ ಬಳಕೆದಾರರಿಗೆ ತಿಂಗಳಿಗೆ 200 ರೂಪಾಯಿ ಬಿಲ್ ಬರುತ್ತಿದ್ರೆ ಮುಂದಿನ ಬಿಲ್‌ನಲ್ಲಿ 20-30 ರೂಪಾಯಿ ಹೆಚ್ಚುವರಿ ಹೊರೆಯಾಗುವ ಸಾಧ್ಯತೆ ಇದೆ. ವಾಣಿಜ್ಯ ಬಳಕೆದಾರರಿಗೆ ಪ್ರತಿ ತಿಂಗಳು 50-60 ರೂಪಾಯಿ ಏರಿಕೆ ಆಗುವ ಸಾಧ್ಯತೆ ಇದೆ.

ನೀರಿನ ದರ ಎಷ್ಟು ಹೆಚ್ಚಳ!

ಡೊಮೆಸ್ಟಿಕ್ ಕನೆಕ್ಷನ್‌ – ಲೀಟರ್‌ಗೆ ಒಂದು ಪೈಸೆ ಹೆಚ್ಚಳ
0-8 ಸಾವಿರದೊಳಗೆ ಸ್ಲ್ಯಾಬ್‌ ಲೀಟರ್‌ಗೆ 0.15 ಪೈಸೆ ಹೆಚ್ಚಳ
8-25 ಸಾವಿರದೊಳಗಿನ ಸ್ಲ್ಯಾಬ್‌ ಲೀಟರ್‌ಗೆ 0.40 ಪೈಸೆ ಹೆಚ್ಚಳ
25 ಸಾವಿರ ಲೀಟರ್‌ಗಿಂತ ಹೆಚ್ಚು ಬಳಕೆ ಮಾಡಿದ್ರೆ 0.80 ಪೈಸೆ ಹೆಚ್ಚಳ
50 ಸಾವಿರದಿಂದ 1 ಲಕ್ಷ ಲೀಟರ್ ನೀರು ಬಳಕೆಗೆ 1 ಪೈಸೆ ಹೆಚ್ಚಳ
ಪ್ರತಿ ವರ್ಷ ಏಪ್ರಿಲ್ 1ರಿಂದ ಶೇಕಡಾ 3ರಷ್ಟು ನೀರಿನ ದರ ಹೆಚ್ಚಳ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments