#Exclusive NewsTop Newsಜಿಲ್ಲೆಸುದ್ದಿ

ಮಳೆಗೆ ಕುಸಿದ ಕಟ್ಟಡ..! ಓರ್ವ ಕಾರ್ಮಿಕ ಬಲಿ.! ಕಟ್ವಡ ಕುಸಿತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಅಕ್ಟೋಬರ್ 22 ಬೆಂಗಳೂರು: ಬಿಟ್ಟು ಬಿಡದೆ ಸುರಿಯುತ್ತಿರುವ ರಣ ಮಳೆ, ಹೆಣ್ಣೂರು ಸಮೀಪದ ಬಾಬುಸಾ​ಬ್​ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಓರ್ವ ಕಾರ್ಮಿಕ ಸಾವು. ಇಂದು ಮಧ್ಯಾಹ್ನ 3.45 ರ ಸುಮಾರಿಗೆ ಈ ಘಟನೆ ನಡೆದಿದೆ.ಒಟ್ಟು 20 ಜನ ಬಿಹಾರ ಮೂಲದವರು ಕೆಲಸ ಮಾಡ್ತೀದ್ರು.ಅದರಲ್ಲಿ 14 ಜನರು ಪಾರಾಗಿದ್ದಾರೆ ಉಳಿದ ಐದು ಜನ ಕಾರ್ಮಿಕರಗಾಗಿ ಮುಂದುವರೆದ ಶೋಧಕಾರ್ಯ.60×40 ಸೈಟ್‌ನಲ್ಲಿ ಎಂಟಸ್ತಿನ ಮನೆ ನಿರ್ಮಾಣ ಮಾಡ್ತಿದ್ರು.ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯ ಪೊಲೀಸರಿಂದ ಮುಂದುವರಿದ ರಕ್ಷಣಾ ಕಾರ್ಯಾಚರಣೆ..

 

ಕಟ್ಟಡ ಕುಸಿಯುತ್ತಿದ್ದಂತೆಯೇ ಅವಶೇಷಗಳಡಿಯಲ್ಲಿ ಸಿಲುಕಿದ್ದ ಕಾರ್ಮಿಕನೋರ್ವ ರಕ್ತ ಸಿಕ್ತ ಸ್ಥಿತಿಯಲ್ಲಿ ಆಚೆ ಬಂದಿದ್ದು, ಕಾರ್ಮಿಕನ ತಲೆಗೆ ಪೆಟ್ಟಾಗಿ ರಕ್ತ ಸೋರುತ್ತಿದೆ. ಇನ್ನು ರಕ್ತದ ಮಡುವಿನಲ್ಲೇ ಅಳುತ್ತ ನಮ್ಮವರು ಒಳಗೆ ಸಿಲುಕಿದ್ದಾರೆಂದು ಮಾಹಿತಿ ನೀಡಿದ್ದಾನೆ. ಒಳಗೆ ಇನ್ನು ಕಾರ್ಮಿಕರು ಇದ್ದಾರೆ ಎನ್ನುವುದು ಖಚಿತವಾಗುತ್ತಿದ್ದಂತೆಯೇ ರಕ್ಷಣಾ ಕಾರ್ಯಚರಣೆ ಚುರುಕುಗೊಂಡಿದೆ. ಮಳೆ ನಡುವೆಯೇ ಮುಂದುವರಿದ ಶೋಧಕಾರ್ಯ..

ಸದ್ಯ ಸ್ಥಳದಲ್ಲಿ ಮುಗಿಲು ಮುಟ್ಟಿದ ಜನರ ಆಕ್ರಂದನ, ಮೃತ ಕಾರ್ಮಿಕರ ಹಾಗೂ ಕುಸಿದ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರ ಕುರಿತು, ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು..

Comments (0)

Your email address will not be published. Required fields are marked *

Back to top button