#Exclusive NewsTop Newsರಾಜ್ಯಸುದ್ದಿ

3 ಸಾವಿರಕ್ಕೆ ಮುಡಾ ಸೈಟ್ ಖರೀದಿ​ ಆರೋಪಕ್ಕೆ ಬಿಲ್ಡರ್ ಮಂಜುನಾಥ್ ಸ್ಪಷ್ಟನೆ ಏನು..?

ಮುಡಾ ಸೈಟ್  ಅಕ್ರಮ ಹಗರಣದಲ್ಲಿ ತಮ್ಮ ಮೇಲಿನ ಆರೋಪಗಳಿಗೆ ಬಿಲ್ಡರ್ ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ. ಮುಡಾ ಸೈಟ್‌ಗಾಗಿ ನಾನು ಕಟ್ಟಿರುವ 3,000 ರೂಪಾಯಿ ಸಾಂಕೇತಿಕ ಮೊತ್ತ. ಪರಿಹಾರ ರೂಪದಲ್ಲಿ ಪ್ರಾಧಿಕಾರದಿಂದ ನಿವೇಶನ ಪಡೆಯುವಾಗ ಸಾಂಕೇತಿಕವಾಗಿ ಅಷ್ಟೇ ಹಣ ನೀಡುವ ನಿಯಮ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಮೇಲಿನ ಆರೋಪಗಳ ಬಗ್ಗೆ ಮೊದಲ ಬಾರಿಗೆ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿರುವ ಮಂಜುನಾಥ್, ಪ್ರಾಧಿಕಾರಕ್ಕೆ ನಾನು ಕಟ್ಟಿರುವುದು 3,000 ರೂ. ಸಾಂಕೇತಿಕವಾದ ಮೊತ್ತ. ಪರಿಹಾರ ರೂಪದಲ್ಲಿ ಪ್ರಾಧಿಕಾರದಿಂದ ನಿವೇಶನ ಪಡೆಯುವಾಗ ಸಾಂಕೇತಿಕವಾಗಿ ಅಷ್ಟೇ ಹಣ ನೀಡುವ ನಿಯಮ ಇದೆ. ನಾನು ಜಿಪಿಐ ಮಾಡಿಕೊಂಡಿದ್ದ ಜಮೀನಿನಲ್ಲಿ ಬಡಾವಣೆ ಮಾಡಿದ್ದೆ. ಅದರಲ್ಲಿ ಒಳಚರಂಡಿಗೆ ಬಹಳಷ್ಟು ಜಮೀನನ್ನು ಮುಡಾ ಬಳಸಿಕೊಂಡಿತ್ತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ನ್ಯಾಯಾಲಯದ ಆದೇಶದಂತೆ ಪರಿಹಾರವಾಗಿ ಸೈಟ್ ಪಡೆದಿದ್ದೇನೆ.

ನಾನು ಜಿಪಿಐ ಮಾಡಿಕೊಂಡಿದ್ದ ಜಮೀನಿನಲ್ಲಿ ಬಡಾವಣೆ ಮಾಡಿದ್ದೆ. ಅದರಲ್ಲಿ ಒಳಚರಂಡಿಗೆ ಬಹಳಷ್ಟು ಜಮೀನನ್ನು ಮುಡಾ ಬಳಸಿಕೊಂಡಿತ್ತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ನ್ಯಾಯಾಲಯದ ಆದೇಶದಂತೆ ಪರಿಹಾರವಾಗಿ ಸೈಟ್ ಪಡೆದಿದ್ದೇನೆ. ಕೆಲವರು ಪ್ರಚಾರಕ್ಕಾಗಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ದಟ್ಟಗಳ್ಳಿಯಲ್ಲಿ ನಾವು ಭೂಮಿ ಕಳೆದುಕೊಂಡಿದ್ದೆವು. ಅದಕ್ಕೆ ವಿಜಯನಗರದ ನಾಲ್ಕನೆ ಹಂತದಲ್ಲಿ ಸೈಟ್ ಕೊಡಲಾಗಿದೆ. ಬಡಾವಣೆ ಮಾಡುವಾಗ ನಮಗೆ ಶೇ.58 ರಷ್ಟು ಸೈಟ್‌ಗಳು ಸಿಗಬೇಕಿತ್ತು. ಆದರೆ ಸಿಕ್ಕಿದ್ದು, ಶೇ.38 ರಷ್ಟು ಮಾತ್ರ. ಹೀಗಾಗಿ, ಆ ಭೂಮಿಗೆ ಪ್ರಾಧಿಕಾರ 23 ಸೈಟ್ ಪರಿಹಾರವಾಗಿ ಕೊಟ್ಟಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button