Top Newsದೇಶ/ವಿದೇಶ

ಬಜೆಟ್ 2026: ದೇಶಾದ್ಯಂತ 20 ಹೊಸ ರಾಷ್ಟ್ರೀಯ ಜಲಮಾರ್ಗಗಳ ಘೋಷಣೆ

ನವದೆಹಲಿ: ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ, ಜಲಮಾರ್ಗಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಭರ್ಜರಿ ಕೊಡುಗೆ ನೀಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತ 20 ಹೊಸ ರಾಷ್ಟ್ರೀಯ ಜಲಮಾರ್ಗಗಳನ್ನು ಕಾರ್ಯಗತಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಕಟಿಸಿದ್ದಾರೆ.

ತರಬೇತಿ ಮತ್ತು ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ

ಜಲಮಾರ್ಗಗಳ ಅಭಿವೃದ್ಧಿಯ ಜೊತೆಗೆ ಈ ಕ್ಷೇತ್ರದಲ್ಲಿ ಪರಿಣಿತರನ್ನು ಸೃಷ್ಟಿಸಲು ಸರ್ಕಾರ ಮುಂದಾಗಿದೆ. ಜಲಮಾರ್ಗಗಳ ವ್ಯಾಪ್ತಿಯಲ್ಲಿಯೇ ‘ಪ್ರಾದೇಶಿಕ ಶ್ರೇಷ್ಠತೆಯ ಸಂಸ್ಥೆಗಳನ್ನು’ (Regional Institutes of Excellence) ಸ್ಥಾಪಿಸಲಾಗುವುದು. ಇವು ತರಬೇತಿ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಲಿದ್ದು, ನೌಕಾಯಾನ ಮತ್ತು ಜಲಮಾರ್ಗ ನಿರ್ವಹಣೆಯಲ್ಲಿ ಯುವಕರಿಗೆ ವೃತ್ತಿಪರ ಶಿಕ್ಷಣ ನೀಡಲಿವೆ.

ವಾರಣಾಸಿ ಮತ್ತು ಪಾಟ್ನಾದಲ್ಲಿ ಹಡಗು ದುರಸ್ತಿ ಹಬ್

ಒಳನಾಡಿನ ಜಲಮಾರ್ಗಗಳ ಸುಗಮ ಸಂಚಾರಕ್ಕೆ ಪೂರಕವಾಗಿ ವಾರಣಾಸಿ ಮತ್ತು ಪಾಟ್ನಾದಲ್ಲಿ ಸುಸಜ್ಜಿತ ‘ಹಡಗು ದುರಸ್ತಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲಾಗುವುದು. ಜಲಮಾರ್ಗಗಳಲ್ಲಿ ಸಂಚರಿಸುವ ಹಡಗುಗಳ ತಾಂತ್ರಿಕ ನಿರ್ವಹಣೆ ಮತ್ತು ದುರಸ್ತಿಗೆ ಒತ್ತು ನೀಡಲಿವೆ, ಇದರಿಂದ ವಾಣಿಜ್ಯ ಸಾಗಣೆ ಮತ್ತಷ್ಟು ಸುಲಭವಾಗಲಿದೆ.

ಈ ಯೋಜನೆಯು ರಸ್ತೆ ಮತ್ತು ರೈಲ್ವೆ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಸರಕು ಸಾಗಣೆ ವೆಚ್ಚವನ್ನು ಗಣನೀಯವಾಗಿ ಇಳಿಸುವ ನಿರೀಕ್ಷೆಯಿದೆ.

Comments (0)

Your email address will not be published. Required fields are marked *

Back to top button