ಶಿವಮೊಗ್ಗ: ರಾಜ್ಯದಲ್ಲಿ 28 ಸ್ಥಾನ ಗೆಲುವಿನ ವಿಶ್ವಾಸವಿದೆ. ರಾಘವೇಂದ್ರ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಅಲೆಯು ರಾಜ್ಯದೆಲ್ಲೆಡೆ ಇದೆ ಅಮಿತ್ ಷಾ ಕೂಡಾ ರಾಜ್ಯದ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುತ್ತಾರೆ ಎಂದರು.
ಸಿದ್ದರಾಮಯ್ಯ 20 ಸ್ಥಾನ ಗೆಲುವು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲು ನಾಲ್ಕು ಸ್ಥಾನ ಗೆಲುವಿನ ಕ್ಷೇತ್ರ ಹೆಸರಿಸಲಿ. ಮೊದಲು ಅವರ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳಲಿ ಮೊದಲು ಅದರ ಸ್ಪಷ್ಟತೆ ಇಲ್ಲ. ಚೊಂಬು ಗ್ಯಾರಂಟಿ ವಿಚಾರ ಅದರಲ್ಲಿ ಯಾವುದೇ ಅರ್ಥ ಇಲ್ಲ ಯತೀಂದ್ರ ಮೋದಿ ವಿರುದ್ಧ ಟೀಕೆಗೆ ಬಿಎಸ್ ವೈ ತಿರುಗೇಟು ನೀಡಿದರು.
ಮೋದಿ ಬಗ್ಗೆ ಹಗುರವಾಗಿ ಮಾತನಾಡುವರ ಬಗ್ಗೆ ನಾನೇನು ಹೇಳುವುದಿಲ್ಲ,ಬೀದಿಯಲ್ಲಿ ಹೊಗುವವರು ಮೋದಿ ಬಗ್ಗೆ ಟೀಕೆ ಮಾಡಿದರೆ ಅವರ ಗೌರವ ಕಡಿಮೆ ಆಗುವುದಿಲ್ಲ ಎಂದರು.