ಬೆಂಗಳೂರು: ನಗರದ ಆರ್.ಆರ್ ನಗರ, ಕೆಂಗೇರಿ ಸೇರಿದಂತೆ 40ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನಿಸಲಾಗಿದೆ. roadkill333@atomicmail.io ಎಂಬ ಇ-ಮೇಲ್ನಿಂದ ಸಂದೇಶ ಕಳುಹಿಸಲಾಗಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದೆ.
ಮಕ್ಕಳನ್ನು ಶಾಲೆಯಿಂದ ಹೊರಗೆ ಕಳುಹಿಸಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದೆ. ಇ-ಮೇಲ್ ಮೂಲಕ ಸಂದೇಶದಲ್ಲಿ ಸ್ಫೋಟಕಗಳನ್ನು ಚೀಲದಲ್ಲಿ ಕಟ್ಟಿದ್ದೇನೆ. ಯಾರೊಬ್ಬರೂ ಬದುಕುಳಿಯಲ್ಲ ಎಂದು ಕಿಡಿಗೇಡಿ ಹೆದರಿಸಿದ್ದಾನೆ. ನೀವೆಲ್ಲರೂ ಕಷ್ಟ ಅನುಭವಿಸಲೇಬೇಕು, ನಿಮಗೆ ಯಾರೂ ಸಹಾಯ ಮಾಡಲ್ಲ.ನಾನು ಕೂಡ ಸಾಯುತ್ತೇನೆ ಎಂದು ಕಿಡಿಗೇಡಿ ಮೇಲ್ ಮಾಡಿದ್ದಾನೆ.


