ತುಮಕೂರು: ಅಪರಿಚಿತ ಮಹಿಳೆಯ ತುಂಡು ತುಂಡಾದ ದೇಹದ ಭಾಗಗಳು ಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿ ಗ್ರಾಮದ ಮುತ್ಯಾಲಮ್ಮ ದೇವಾಲಯದ ಬಳಿ ನಡೆದಿದೆ.
ಚಿಂಪುಗಾನಹಳ್ಳಿ ಹೊರವಲಯದಲ್ಲಿ ಎರಡು ಕೈಗಳು ಪತ್ತೆಯಾಗಿದ್ದು, ಕಪ್ಪು ಹಾಗೂ ಹಳದಿ ಬಣ್ಣದ ಕವರ್ನಲ್ಲಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗ್ರಾಮದ ಮುತ್ಯಾಲಮ್ಮ ದೇವಾಲಯದ ಬಳಿ ಒಂದು ಕೈ ಪತ್ತೆಯಾಗಿದ್ದು, ಈ ಸ್ಥಳದಿಂದ ಸುಮಾರು 1 ಕಿಲೋ ಮೀಟರ್ ದೂರಲ್ಲಿ ಮತ್ತೊಂದು ಕೈ ಪತ್ತೆಯಾಗಿದೆ.
ಅಪರಿಚಿತ ಮಹಿಳೆಯ ಕೈಕಾಲು, ಹೊಟ್ಟೆ ಮತ್ತು ಕರುಳಿನ ಭಾಗ ರಸ್ತೆಯುದ್ದಕ್ಕೂ ಕಪ್ಪು ಮತ್ತೆ ಹಳದಿ ಬಣ್ಣಗಳ ಕವರ್ಗಳಲ್ಲಿ ಪತ್ತೆಯಾಗಿದೆ. ಬೀದಿ ನಾಯಿಗಳು ಕವರ್ಗಳನ್ನು ಎಳೆದಾಡುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಕೂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.


