Thursday, January 29, 2026
18 C
Bengaluru
Google search engine
LIVE
ಮನೆUncategorizedಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ: ರಸ್ತೆ ರಸ್ತೆಗಳಲ್ಲಿ ಜಲಮಂಡಳಿ ಟ್ಯಾಂಕರ್

ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ: ರಸ್ತೆ ರಸ್ತೆಗಳಲ್ಲಿ ಜಲಮಂಡಳಿ ಟ್ಯಾಂಕರ್

ಬೆಂಗಳೂರು : ಬೇಸಿಗೆ ಮುನ್ನವೇ ಬೆಂಗಳೂರಿನಲ್ಲಿ ನೀರಿಗೆ ಬರ ಎದುರಾಗಿದೆ. ರಾಜಧಾನಿಯಲ್ಲಿ ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಶುರುವಾಗಿದೆ.

ನೀರಿನ ಸಮಸ್ಯೆ ನೀಗಿಸೋಕೆ ಜಲಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ನಗರದಲ್ಲಿ ನೀರಿನ ಸಮಸ್ಯೆಗೆ ಪರಿಹಾರವಾಗಿ ಸಾರ್ವಜನಿಕರು ನೀರಿನ ಟ್ಯಾಂಕರ್ ಗಳ ಮೊರೆ ಹೋಗುತ್ತಿದ್ದಾರೆ. ಇನ್ನು ನೀರಿನ ಟ್ಯಾಂಕರ್ ನವರು, ನೀರಿನ ಅಭಾವವನ್ನೇ ಬಂಡವಾಳ ಮಾಡ್ಕಂಡು ಮನಸೋ ಇಚ್ಚೆ ಸುಲಿಗೆ ಮಾಡೋಕೆ ಮುಂದಾಗಿದ್ದಾರೆ.

ಇತ್ತ ನೀರಿಗಾಗಿ ಜನ ಸಾವಿರಾರೂ ರೂಪಾಯಿ ವ್ಯಯಿಸುವ ಸ್ಥಿತಿ ನಿರ್ಮಾಣವಾಗಿದೆ. ನೀರು ಮೂಲಭೂತ ಸೌಕರ್ಯಗಳಲ್ಲಿ ಪ್ರಮುಖವಾದದ್ದು..ಹೀಗಾಗಿ ನೀರಿಲ್ಲದೆ ಇದ್ದರೆ ಜನರ ದಿನಚರಿ ನಡೆಯೋದಿಲ್ಲ ಅನ್ನೋದು ಗೊತ್ತಾಗಿರು ಟ್ಯಾಂಕರ್ ನವರು ಸುಲಿಗೆಗೆ ಇಳಿದಿದ್ದಾರೆ. ಇದಕ್ಕೆ ಪರ್ಯಾಯವಾಗಿ ಜಲಮಂಡಳಿ, ಟ್ಯಾಂಕರ್ ನವರ ಸುಲಿಗೆ ತಡೆಯುವ ನಿಟ್ಟಿನಲ್ಲಿ ಮಿನಿ ಟ್ಯಾಂಕರ್ ನಿರ್ಮಾಣ ಮಾಡೋಕೆ ಮುಂದಾಗಿದೆ.

ನಗರದ ವಿವಿಧೆಡೆ ಅಂತರ್ಜಲ ಮಟ್ಟ ಕುಸಿತ ಕಂಡಿದ್ದು, ಬೆಂಗಳೂರು ಜಲಮಂಡಳಿ ನಾಗರಿಕರಿಗೆ ನೀರು ಪೂರೈಕೆಗೆ ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಹಳ್ಳಿಗಳಲ್ಲಿ ಕಾರ್ಪೋರೇಷನ್ ನೀರು ಬರ್ತಿಲ್ಲ. ಹೀಗಾಗಿ ಜಲಮಂಡಳಿ ಮಿನಿಟ್ಯಾಂಕರ್ ಗಳಲ್ಲಿ ನೀರು ಪೂರೈಕೆಗೆ ಮುಂದಾಗಿದೆ. ಆದ್ರೆ ಪೂರ್ಣ ಪ್ರಮಾಣದಲ್ಲಿ ಜನರ ನೀರಿನ ದಾಹ ತಣಿಸೋದು ಸುಲಭದ ಮಾತಲ್ಲ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments