
ಸಿಲಿಕಾನ್ ಸಿಟಿ ಅಟ್ರ್ಯಾಕ್ಷನ್ ಹೆಚ್ಚಿಸಲು ಡಬಲ್ ಡೆಕ್ಕರ್ ಬಸ್ ಖರೀದಿಗೆ ಮುಂದಾಗಿದ್ದ ಬಿಎಂಟಿಸಿ, ಸದ್ಯ ಯೋಜನೆ ಕೈಬಿಟ್ಟಿರೋದಾಗಿ ತಿಳಿಸಿದೆ. ಇನ್ನು 1970 ಮತ್ತು 1980 ರ ದಶಕದಲ್ಲಿ ಡಬಲ್ ಡೆಕ್ಕರ್ ಬಸ್ ಸೇವೆ ಆರಂಭ ಮಾಡಿತ್ತು, ಆದ್ರೆ 1997 ರಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರ ನಿಲ್ಲಿಸಲಾಗಿತ್ತು. ಇನ್ನು ಕಳೆದ ವರ್ಷರಾಜ್ಯ ರಾಜ್ಯಧಾನಿಯಲ್ಲಿ ಡಬಲ್ ಡೆಕ್ಕರ್ ಬಸ್ ಚಾಲನೆಗೆ ಮನಸ್ಸು ಮಾಡಿದ್ದ ಬಿಎಂಟಿಸಿ, 10 ಡಬಲ್ ಡೆಕ್ಕರ್ ಬಸ್ ಖರೀದಿಗೆ ಯೋಜನೆ ರೂಪಿಸಿತ್ತು, ಆದ್ರೆ ಡಬಲ್ ಡೆಕ್ಕರ್ ಬಸ್ ಟೆಂಡರ್ಗೆ ಉತ್ತಮ ಸ್ಪಂದನೆ ಸಿಗಲಿಲ್ಲ. ಆಲ್ದೆಈ ಬಸ್ ಗಳು ಸಂಚಾರ ಆರಂಭಿಸಲು ಹೋದ್ರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಅಂತ ಹೇಳಲಾಗ್ತಿದೆ. ಬಿಡ್ ದಾರರು ಪ್ರತಿ ಕಿ ಮೀಟರ್ ಗೆ 102 ರೂ ಪ್ರಸ್ತಾಪ ಮಾಡಿದ್ದು, ಅತಿ ಹೆಚ್ಚು ದರ ದಾಖಲು ಮಾಡಿದ ಪರಿಣಾಮ ಇದೀಗ ಯೋಜನೆಯನ್ನೇ ಕೈಬಿಟ್ಟಿರೋದಾಗಿ ಬಿಎಂಟಿಸಿ ಆಡಳಿತ ಮಂಡಳಿ ಚಿಂತನೆ ನಡೆಸಿದೆ ಎನ್ನಲಾಗ್ತಿದೆ…


