bengaluru
ಬಿಎಂಟಿಸಿ ಬಸ್ ಅಟ್ಟಹಾಸ;ಸಂಚಾರ ನಿಯಂತ್ರಕರ ಕೊಠಡಿಗೇ ನುಗ್ಗಿದ ಬಸ್!

ಬೆಂಗಳೂರು: ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಎಲೆಕ್ಟ್ರಿಕ್ ಬಸ್ ಒಂದು ಸಂಚಾರ ನಿಯಂತ್ರಕರ ಕೊಠಡಿಗೆ ನುಗ್ಗಿದ ಘಟನೆ ನಗರದ ಪೀಣ್ಯ 2ನೇ ಹಂತದ ಡಿಪೋದಲ್ಲಿ ನಡೆದಿದೆ. ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದು, ದೊಡ್ಡ ಪ್ರಮಾಣದ ಅವಘಡ ತಪ್ಪಿದೆ.
KA 51 AK 4169 ಸಂಖ್ಯೆಯ ಎಲೆಕ್ಟ್ರಿಕ್ ಬಸ್ ಅನ್ನು ಚಾಲಕ ಹ್ಯಾಂಡ್ ಬ್ರೇಕ್ ಹಾಕದೆ ನಿಲ್ಲಿಸಿ ತೆರಳಿದ್ದಾನೆ. ಇದರಿಂದ ಬಸ್ ಸ್ವಯಂಚಾಲಿತವಾಗಿ ಮುಂದೆ ಚಲಿಸಿ ಡಿಪೋ ಒಳಗೆ ನುಗ್ಗಿ ಸಂಚಾರ ನಿಯಂತ್ರಕರ ಕೊಠಡಿಗೆ ಡಿಕ್ಕಿ ಹೊಡೆದಿದೆ.ಈ ಅಪಘಾತದಲ್ಲಿ ನಾಲ್ಕು ಬೈಕ್‌ಗಳು ಹಾನಿಗೊಳಗಾಗಿವೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಘಟನೆಯ ನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.