ಮೈಸೂರು : ಬಿಜೆಪಿ ನಾಯಕರು ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳ ಚಲೋ ಹಮ್ಮಿಕೊಂಡಿದೆ. ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತಾಡಿದ ಅವರು, ಬಿಜೆಪಿ ರಾಜಕೀಯವಾಗಿ ಧರ್ಮಸ್ಥಳ ಯಾತ್ರೆ ಕೈಗೊಂಡಿದೆ. ಅವರಿಗೆ ರಾಜಕೀಯ ಲಾಭ ಸಿಗುತ್ತದೆ ಎಂದು ಭಾವಿಸಿದ್ದಾರೆ. ಆದರೆ ಅದು ಸಿಗುವುದಿಲ್ಲ. ಏಕೆಂದರೆ ಧರ್ಮಸ್ಥಳದ ಬಗ್ಗೆ ನಮಗೆ ಅಪಾರವಾದ ಗೌರವವಿದೆ.
ಎಸ್.ಐ.ಟಿ ರಚನೆ ಅದಾಗ ಬಿಜೆಪಿ ಯಾಕೆ ವಿರೋಧ ಮಾಡಲಿಲ್ಲ? ಕೆಲ ಕಡೆ ಏನು ಸಿಗಲಿಲ್ಲ ಎಂದು ಈಗ ಹೋರಾಟ ಅಂತ ಮುಂದೆ ಬಂದಿದ್ದಾರೆ ಎಂದು ಹೇಳಿದರು. ಇನ್ನು ಬಿಜೆಪಿ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಮಾತನಾಡಿ, ನಾನು ಕೂಡ ಹಿಂದೂನೇ ಹಿಂದೂಗಳು ಒಟ್ಟಾಗುತ್ತಾರೆ ಅಂತೆಲ್ಲಾ ಹೇಳಿಕೆ ಕೊಡ್ತಿದ್ದಾರೆ. ನಾನು ಕೂಡ ಹಿಂದೂನೇ, ಎಲ್ಲಾ ಹಿಂದೂಗಳು ಅವರ ಪರ ಇಲ್ಲ. ನಮ್ಮ ಊರಿನಲ್ಲೇ ರಾಮ ಮಂದಿರ ಮಾಡಿದ್ದೇವೆ. ಹಿಂದೂಗಳು ಅಂದ್ರೆ ರಾಜಕೀಯ ಮಾಡೋದಲ್ಲ. ಅಪಪ್ರಚಾರ ಮಾಡೋದು ಅಲ್ಲ. ಸುಳ್ಳು ಹೇಳೋದು ಅಲ್ಲ. ಮನುಷ್ಯತ್ವ ಇಲ್ಲದ ಮೇಲೆ ಅವರನ್ನು ಏನಂತ ಕರೀಬೇಕು? ಎಂದು ಸಿದ್ದರಾಮಯ್ಯ ಹೇಳಿದ್ರು.
ದಸರಾ ವಿಚಾರದಲ್ಲೂ ರಾಜಕಾರಣ ಮಾಡಿದ್ರು. ಅವ್ರ ಮನೆಯನ್ನು ರಾಜಕಾರಣ ಮಾಡ್ತಾರೆ. ಸುಳ್ಳು ಹೇಳೋದು ಬಿಟ್ಟರೆ ಬಿಜೆಪಿ ಅವರಿಗೆ ಬೇರೇನೂ ಬರಲ್ಲ.ದಸರಾ ಹಬ್ಬದ ಮೇಲೆ ಈ ರಾಜಕಾರಣ ಯಾವುದೇ ಪರಿಣಾಮ ಬೀರುವುದಿಲ್ಲ. ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯೇ ಇರಬಹುದು. ದಸರಾ ಹಬ್ಬ ನಾಡ ಹಬ್ಬವಲ್ಲವೇ? ನಾಡ ಹಬ್ಬ ಎಂದರೆ ಎಲ್ಲರೂ ಸೇರಿ ಮಾಡುವುದು. ಹಿಂದೂ, ಮುಸಲ್ಮಾನರು, ಕ್ರಿಶ್ಚಿಯನ್ನರು, ಬೌದ್ಧರು ಸೇರಿ ಆಚರಿಸುವ ಹಬ್ಬ ಎಂದರು.