ಹುಬ್ಬಳ್ಳಿ: ಬಿಜೆಪಿಯವರು ಚುನಾವಣೆಗಾಗಿ ರಾಮನನ್ನು ಬಳಸಿಕೊಳ್ಳುತ್ತಾರೆ. ನಾವು ಶ್ರದ್ಧೆ, ಭಕ್ತಿಯಿಂದ ರಾಮನನ್ನ ಪೂಜೆ ಮಾಡ್ತೀವಿ, ಕಾಂಗ್ರೆಸ್ ನವರು ನಿಜವಾದ ಹಿಂದೂಗಳೆಂದು ಹುಬ್ಬಳ್ಳಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಯಾವತ್ತೂ ಕೂಡ ರಾಜಕಾರಣಕ್ಕೆ ಹಿಂದುತ್ವ ಮತ್ತು ಶ್ರೀರಾಮನನ್ನ ತೆಗೆದುಕೊಂಡು ಬಂದಿಲ್ಲ. ದೇಶದಲ್ಲಿ ಲಕ್ಷಾಂತರ ರಾಮನ ದೇವಸ್ಥಾನಗಳಿವೆ. ಬಿಜೆಪಿಯವರು ವೋಟ್ಟೋಸ್ಕರ ಶ್ರೀರಾಮನನ್ನ ನೆನಪು ಮಾಡಿಕೊಳ್ಳುತ್ತಿದ್ದಾರೆ.ಕಾಂಗ್ರೆಸ್ನವರು ಯಾವತ್ತಿಗೂ ದೇವರನ್ನ ಹಿಂದುತ್ವವನ್ನ ರಾಜಕಾರಣದಲ್ಲಿ ತರೋಲ್ಲ. ಇವರಿಗೆ ಏನೂ ಬಂಡವಾಳ ಇಲ್ಲ, ಹೀಗಾಗಿ ಧರ್ಮವನ್ನ ತರುತ್ತಾರೆ.
ಪ್ರಹ್ಲಾದ್ ಜೋಶಿ ಗಿಮ್ಮಿಕ್ ಮಾಡ್ತಾ ಇದ್ದಾರೆ, ಅವರು ಅಂಕಿ ಅಂಶ ಇಟ್ಟುಕೊಂಡು ಮಾತನಾಡಬೇಕು.ಬಿಜೆಪಿಯವರು ರಾಜಕಾರಣಕ್ಕೆ ಏನ್ ಏನೋ ಮಾತನಾಡುತ್ತಾರೆ, ಅದಕ್ಕೆ ತಲೆ ಕೆಡಿಸಿಕೊಳ್ಳುವುದು ಅವಶ್ಯಕತೆ ಇಲ್ಲ. ಬಿಜೆಪಿಯವರು ಪುಕ್ಸಟ್ಟೆಯಾಗಿ ಅಧಿಕಾರಕ್ಕೆ ಬಂದವರು, ಪುಕ್ಸಟ್ಟೆಯಾಗಿ ಏನೂ ಕೊಡಲಿಲ್ಲ. ಬಿಜೆಪಿಯವರು ಕೆಲಸ ಮಾಡಲ್ಲ, ಕೆಲಸ ಮಾಡುವವರಿಗೂ ಬಿಡಲ್ಲ. ಆಗೋದಕ್ಕೆ ಹರಕತ್ತು, ಆಗದಿದ್ದಕ್ಕೆ ಕುಮ್ಮಕ್ಕು ಎನ್ನುವುದು ಬಿಜೆಪಿಯವರ ಕಥೆ, ಬಿಜೆಪಿಯವರ ಮಾತಿಗೆ ಕಿಮ್ಮತ್ತಿಲ್ಲ, ಜನು ಅವರನ್ನ ಏಕೆ ಮನೆಗೆ ಕಳುಹಿಸಿದ್ರು. ಈಗ ನಾವು ಕೆಲಸ ಮಾಡ್ತಾ ಇದ್ದೀವಿ, ಪ್ರತಿದಿನ 60 ಲಕ್ಷ ಮಹಿಳೆಯರು ಫ್ರೀಯಾಗಿ ಸಂಚಾರ ಮಾಡ್ತಾರೆ. ಅವರ ಶಾಪ ಬಿಜೆಪಿಗರಿಗೆ ತಟ್ಟುತ್ತೆ.
ಶಕ್ತಿ ಯೋಜನೆಯಲ್ಲಿ ನಿರೀಕ್ಷೆಗೂ ಮೀರಿ ಮಹಿಳೆಯರು ಸಂಚಾರ ಮಾಡ್ತಾ ಇದ್ದಾರೆ. 84 ಲಕ್ಷದಿಂದ 1 ಕೋಟಿ 10 ಲಕ್ಷ ಜನ್ನು ಸಂಚಾರ ಮಾಡುತ್ತಿದ್ದಾರೆ. ಮೂರು ಡಿಸಿಎಂಗಳ ಬೇಡಿಕೆ ಇಟ್ಟಿದ್ದು ಏನೂ ತಪ್ಪಿಲ್ಲ, ತೀರ್ಮಾನ ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು.