ಬಿಜೆಪಿ ಭದ್ರಕೋಟೆಯಾಗಿದ್ದ ಶಿಗ್ಗಾಂವಿಯಲ್ಲಿ ಭರತ್ಬೊಮ್ಮಾಯಿಗೆ ತೀವ್ರ ಮುಖಭಂಗವಾಗಿದೆ.. ಕಾಂಗ್ರೆಸ್ ಯಾಸೀರ್ ಅಹ್ಮದ್ ಖಾನ್ 1,00,756 ಮತಗಳನ್ನ ಪಡೆದಿದ್ದು, ಭರತ್ ಬೊಮ್ಮಾಯಿ 87, 308 ವೋಟ್ಗಳನ್ನ ಪಡೆದಿದ್ದಾರೆ.. ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಪುತ್ರನ ಸೋಲಿಗೆ ಕಾರಣವೇನು ಅನ್ನೋದನ್ನ ನೋಡೋದಾದ್ರೆ..ಬಸವರಾಜ ಬೊಮ್ಮಾಯಿ ಸಿಎಂ ಆದಾಗ ಕ್ಷೇತ್ರದ ಅಭಿವೃದ್ಧಿ ಕುಂಠಿತ..ಭರತ್ ಬೊಮ್ಮಾಯಿಗೆ ವರ್ಚಸ್ಸಿನ ಕೊರತೆ ಜೊತೆಗೆ ಒಳೇಟು ಕಾರಣವಾಗಿತ್ತು.. ಕ್ಷೇತ್ರದಲ್ಲೇ ಸತೀಶ್ ಜಾರಕಿಹೊಳಿ ವಾಸ್ತವ್ಯ ಹೂಡಿ ಅಹಿಂದ ಮತಗಳನ್ನ ಸೆಳೆದಿದ್ರು. ಕೊನೇ ಕ್ಷಣದಲ್ಲಿ ಬಿಜೆಪಿಯ ಲಿಂಗಾಯತ ಮತಗಳು ಕಾಂಗ್ರೆಸ್ ಪಾಲಾಗಿದ್ದು. ಖಾದ್ರಿ ಮನವೊಲಿಸಿ ಯಾಸೀನ್ ಪರ ಸಿಎಂ, ಡಿಸಿಎಂ ಅಬ್ಬರದ ಪ್ರಚಾರ ಮಾಡಿದ್ರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರಯೋಗಿಸಿದ ವಕ್ಫ್ ಅಸ್ತ್ರ ವಿಫಲವಾಯ್ತು