ರಾಜ್ಯವೈರಲ್ ನ್ಯೂಸ್ಸಿನಿಮಾಸುದ್ದಿ

ಜೀವನಾಂಶ ಬೇಡವೆಂದ ‘ಬಿಂದಾಸ್’ ಬೆಡಗಿ: ಹನ್ಸಿಕಾ ಮೋಟ್ವಾನಿ ವಿಚ್ಛೇದನದ ಅಚ್ಚರಿಯ ನಿರ್ಧಾರ

‘ಬಿಂದಾಸ್’ ಬೆಡಗಿ ಹನ್ಸಿಕಾ ಮೋಟ್ವಾನಿ ಅವರಿಗೆ ಬಾಂದ್ರಾದ ಗೌರವಾನ್ವಿತ ಕುಟುಂಬ ನ್ಯಾಯಾಲಯವು ವಿಚ್ಛೇದನದ ತೀರ್ಪು ನೀಡಿದೆ. ಎರಡೂ ಕಡೆಯವರು ಒಪ್ಪಿಕೊಂಡ ನಂತರ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನವನ್ನು ನೀಡಲಾಗಿದೆ. ಸೊಹೇಲ್ ಅವರಿಂದ ನಟಿ ಯಾವುದೇ ಜೀವನಾಂಶ ಕೇಳಿಲ್ಲ ಎಂದು ವಕೀಲ ಅದ್ನಾನ್ ಶೇಖ್ ತಿಳಿಸಿದ್ದಾರೆ.‌

‘ಬಿಂದಾಸ್’ ಬೆಡಗಿ ಹನ್ಸಿಕಾ ಮೊಟ್ವಾನಿ ಅವರ ವೈವಾಹಿಕ ಜೀವನದ ಕುರಿತಾದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಉದ್ಯಮಿ ಸೊಹೇಲ್ ಖತುರಿಯಾ ಮತ್ತು ಹನ್ಸಿಕಾ ಮೊಟ್ವಾನಿ ಅವರ ನಾಲ್ಕು ವರ್ಷಗಳ ದಾಂಪತ್ಯ ಜೀವನ ಈಗ ಅಧಿಕೃತವಾಗಿ ಅಂತ್ಯಗೊಂಡಿದೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಈ ಜೋಡಿಗೆ ವಿಚ್ಛೇದನ ನೀಡುವ ಮೂಲಕ ಕಾನೂನುಬದ್ಧವಾಗಿ ಇಬ್ಬರನ್ನೂ ಬೇರ್ಪಡಿಸಿದೆ.

2022ರ ಡಿಸೆಂಬರ್‌ನಲ್ಲಿ ಜೈಪುರದ ಐತಿಹಾಸಿಕ ಮುಂಡೋಟಾ ಫೋರ್ಟ್‌ನಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ್ದ ಈ ಜೋಡಿ, ಕೇವಲ ಒಂದೂವರೆ ವರ್ಷದಲ್ಲೇ ದೂರಾಗುವ ನಿರ್ಧಾರ ಕೈಗೊಂಡಿದ್ದರು. ಕಳೆದ ಆಗಸ್ಟ್‌ನಿಂದಲೇ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಈಗ ಆ ವದಂತಿಗಳಿಗೆ ನ್ಯಾಯಾಲಯದ ತೀರ್ಪು ಅಧಿಕೃತ ಮುದ್ರೆ ಒತ್ತಿದೆ.

ಈ ವಿಚ್ಛೇದನದ ಪ್ರಕರಣದಲ್ಲಿ ಗಮನಾರ್ಹ ವಿಷಯವೆಂದರೆ, ಹನ್ಸಿಕಾ ಅವರು ತಮ್ಮ ಮಾಜಿ ಪತಿ ಸೊಹೇಲ್ ಅವರಿಂದ ಯಾವುದೇ ರೀತಿಯ ಜೀವನಾಂಶ ಪಡೆಯಲು ನಿರಾಕರಿಸಿದ್ದಾರೆ. ಇಬ್ಬರ ನಡುವೆ ಪರಸ್ಪರ ಒಪ್ಪಿಗೆಯ ಮೇರೆಗೆ ಈ ವಿಚ್ಛೇದನ ನಡೆದಿದೆ ಎಂದು ಹನ್ಸಿಕಾ ಪರ ವಕೀಲರಾದ ಅದ್ನಾನ್ ಶೇಖ್ ಸ್ಪಷ್ಟಪಡಿಸಿದ್ದಾರೆ. ಸ್ವಾಭಿಮಾನಿ ನಟಿಯಾಗಿ ಹನ್ಸಿಕಾ ತೆಗೆದುಕೊಂಡ ಈ ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನಮ್ಮ ಕಕ್ಷಿದಾರ ಹನ್ಸಿಕಾ ಮೋಟ್ವಾನಿ ಅವರಿಗೆ ಬಾಂದ್ರಾದ ಗೌರವಾನ್ವಿತ ಕುಟುಂಬ ನ್ಯಾಯಾಲಯವು ವಿಚ್ಛೇದನದ ತೀರ್ಪು ನೀಡಿದೆ. ಎರಡೂ ಕಡೆಯವರು ಒಪ್ಪಿಕೊಂಡ ನಂತರ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನವನ್ನು ನೀಡಲಾಗಿದೆ. ಸೊಹೇಲ್ ಅವರಿಂದ ನಟಿ ಯಾವುದೇ ಜೀವನಾಂಶ ಕೇಳಿಲ್ಲ ಎಂದು ವಕೀಲ ಅದ್ನಾನ್ ಶೇಖ್ ತಿಳಿಸಿದ್ದಾರೆ.‌

ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಹನ್ಸಿಕಾ, ಪುನೀತ್ ರಾಜ್‌ಕುಮಾರ್ ಅಭಿನಯದ ‘ಬಿಂದಾಸ್’ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದಿದ್ದರು. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿರುವ ಇವರು, ವೈಯಕ್ತಿಕ ಜೀವನದ ಈ ಏರಿಳಿತಗಳ ನಡುವೆಯೂ ವೃತ್ತಿಜೀವನದತ್ತ ಗಮನ ಹರಿಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button