ಕಲಬುರಗಿ: ಜಿಲ್ಲೆಯ ಚಿಂಚೋಳಿ ಪಟ್ಟಣದ ಶ್ರೀ ಸಿದ್ದಶ್ರೀ ಎಥೆನಾಲ್ ಘಟಕದಿಂದ ಎಥೆನಾಲ್ ತುಂಬಿಕೊಂಡು ತೆಲಂಗಾಣಕ್ಕೆ ಹೋಗುತ್ತಿದ್ದ ಟ್ಯಾಂಕರ್ ಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ಕಳೆದು ಪಲ್ಟಿಯಾದ ಟ್ಯಾಂಕರ್ ಗೆ ಬೆಂಕಿ ಹೊತ್ತಿಕೊಂಡು ಚಾಲಕ ಸಜೀವ ದಹನಗೊಂಡ ಘಟನೆ ನೆರೆಯ ತೆಲಂಗಾಣದ ಪಿಲ್ಲಿಗುಂಡು ಗ್ರಾಮದಲ್ಲಿ ಸಂಭವಿಸಿದೆ.
ಚಿಂಚೋಳಿ ಪಟ್ಟಣದ ಶ್ರೀ ಸಿದ್ದಶ್ರೀ ಎಥೆನಾಲ್ ಘಟಕದಿಂದ ತೆಲಂಗಾಣಕ್ಕೆ ಎಥೆನಾಲ್ ತುಂಬಿಕೊಂಡು ತೆರಳುತ್ತಿದ್ದ ಟ್ಯಾಂಕರ್, ಪಿಲ್ಲಿಗುಂಡು ಸಮೀಪ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ.
ಘಟನೆ ಕುರಿತು ತೆಲಂಗಾಣದ ಅನವಾಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ಯಾಂಕರ್ ಚಿಂಚೋಳಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಒಡೆತನದ ಸಿದ್ದಶ್ರೀ ಎಥೆನಾಲ್ ಪ್ಲಾಂಟ್‌ಗೆ ಸೇರಿದ್ದುದಾಗಿ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಅಗ್ನಿಶಾಮಕ ದಳದ ಸಹಾಯದಿಂದ ಬೆಂಕಿ ನಿಯಂತ್ರಣಕ್ಕೆ ಕ್ರಮಕೈಗೊಂಡಿದ್ದಾರೆ.


