Friday, August 22, 2025
24.8 C
Bengaluru
Google search engine
LIVE
ಮನೆಜಿಲ್ಲೆಬಿಗ್ ಬಾಸ್ ಸೀಸನ್ 10: ಗೆದ್ದು ಸೋತವರಿಗೆ ಸಿಕ್ಕಿದೇನು..?

ಬಿಗ್ ಬಾಸ್ ಸೀಸನ್ 10: ಗೆದ್ದು ಸೋತವರಿಗೆ ಸಿಕ್ಕಿದೇನು..?

ಬೆಂಗಳೂರು : ಬಿಗ್ ಬಾಸ್ ಶೋ ಕರ್ನಾಟಕದ ಲಕ್ಷಾಂತರ ಜನರ ಮನಸೆಳೆದ ಶೋ ದಿನವೂ ಬಿಗ್ ಬಾಸ್ ನಲ್ಲಿ ನಡೆದ ಹಾಗೂ ಹೋಗುಗಳ ಅಪ್ಡೇಟ್ ಸಾಮಾಜಿಕ ಜಾಲತಾಣದಲ್ಲಿ ಹಾಕಲು ತುದಿಗಾಲಿನಲ್ಲಿ ಇರುತ್ತಾರೆ.ಇನ್ನೂ ನಮ್ಮ ಕನ್ನಡದ ಕೆಲ ಟ್ರೋಲ್ ಪೇಜ್ಗಳಂತೂ ದಿನಕ್ಕೆ ಒಬ್ಬೊಬ್ಬರ ಜಾತಕವನ್ನ ಡಿಫ್ರೆಂಟ್ ಆಗಿ ವಿವರಿಸುತ್ತಿತ್ತು , ಸ್ಪರ್ಧಿಗಳನ್ನ ಹೊಗಳುವುದು, ತೆಗಳುವುದು ಇದ್ದೆ ಇರುತ್ತದೆ. ಬಿಗ್ ಬಾಸ್ ನೋಡಲು ಇಷ್ಟ ಇಲ್ಲದೆ ಇದ್ದವರು ಕೂಡ ಕಿಚ್ಚ ಸುದೀಪ್ ಅವರ ಮಾತು ಕೇಳಲು ಶನಿವಾರ ಮತ್ತು ಭಾನುವಾರ ಮಾತ್ರ ಬಿಗ್ ಬಾಸ್ ನೋಡುವವರು ಸಹ ಇದ್ದಾರೆ. ಜನವರಿ 27 ಮತ್ತು 28 ರಂದು ಬಿಗ್ ಬಾಸ್ ಬಾಸ್ ಗ್ರಾಂಡ್ ಫೈನಲ್ ನಡೆಯಿತು. ಸಂಗೀತಾ, ಪ್ರತಾಪ್, ವಿನಯ್, ಕಾರ್ತಿಕ್, ತಕಾಲಿ ಸಂತೋಷ್, ಹಾಗೂ ವರ್ತೂರ್ ಸಂತೋಷ್ ಫೈನಲಿಸ್ಟ್ ಆಗಿದ್ದರು.

ಬಿಗ್ ಬಾಸ್ ಹತ್ತರ ರನ್ನರ್ ಅಪ್ ನಾಲ್ಕನೇ ರನ್ನರ್ ಅಪ್‌ ಆಗಿರುವ ವರ್ತೂರ್ ಸಂತೋಷ್ ಅವರಿಗೆ ಎರಡು ಲಕ್ಷ ರೂಪಾಯಿ ಸಿಕ್ಕಿದೆ.ತುಕಾಲಿ ಸಂತೋಷ್ ಅವರಿಗೆ 2 ಲಕ್ಷ ರೂಪಾಯಿ ಹಣ ಬಹುಮಾನವಾಗಿ ಸಿಕ್ಕಿದೆ. . ಇನ್ನು ಮೂರನೇ ರನ್ನರ್ ಅಪ್‌ ಅನೌನ್ಸ್ ಮಾಡಿದ್ದು ವಿನಯ್ ಅವರನ್ನು. ವಿನಯ್ ಅವರಿಗೆ ಸಿಕ್ಕಿರುವ ಬಹುಮಾನ ಐದು ಲಕ್ಷ ರೂಪಾಯಿ. ಟಾಪ್ 3 ಫೈನಲಿಸ್ಟ್ ಆಗಿ ವಿನ್ನರ್ ಯಾರು ಎಂಬ ಕುತೂಹಲದಲ್ಲಿ ಇದ್ದಾಗ ಸಂಗೀತ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದರು. ಸಂಗೀತಾ ಅವರಿಗೆ 7 ಲಕ್ಷ ರೂಪಾಯಿ ಸಿಕ್ಕಿದೆ.

BigBoss Season 10 ರ ವಿನ್ನರ್ ಯಾರೆಂದು ಕುತೂಹಲದಲ್ಲಿ ಇದ್ದಾಗ ಕಾರ್ತಿಕ್ ಮಹೇಶ್ ಅವರು ವಿನ್ನರ್ ಆಗಿ ಹೊರಹೊಮ್ಮಿದರು. ರನ್ನರ್ ಅಪ್ ಡ್ರೋನ್ ಪ್ರತಾಪ್ ಅವರಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ಹಾಗೂ ಬೌನ್ಸ್ ಬೈಕ್ ಬಹುಮಾನವಾಗಿ ಸಿಕ್ಕಿದೆ. ವಿನ್ನರ್ ಆದ ಕಾರ್ತಿಕ್ ಮಹೇಶ್ ಅವರಿಗೆ ಬರೋಬ್ಬರಿ 50 ಲಕ್ಷ ರೂಪಾಯಿ ಹಣ ಹಾಗೂ ಮಾರುತಿ ಸುಜುಕಿ ಬ್ರೇಜಾ ಕಾರು , ಮತ್ತು ಒಂದು ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಸಿಕ್ಕಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments