Top Newsಮನರಂಜನೆಸುದ್ದಿ

ಬಿಗ್ ಬಾಸ್ ಮನೆಯಲ್ಲಿ ಎಲ್ಲವನ್ನು ಕಳೆದುಕೊಂಡು ಒಂಟಿಯಾದ ಭವ್ಯಾ ಗೌಡ- ಬಿಗಿದಪ್ಪಿ ಸಮಾಧಾನ ಮಾಡಿದ ಮೋಕ್ಷಿತಾ..

ಬಿಗ್ ಬಾಸ್ ಕನ್ನಡದಲ್ಲಿ ಭವ್ಯಾ ಗೌಡ ಮತ್ತು ಮೋಕ್ಷಿತಾ ಪೈ ಅವರ ನಡುವಿನ ಸಂಬಂಧದಲ್ಲಿ ಏರುಪೇರುಗಳಿವೆ.ಮೂದಲು  ಪರಸ್ಪರ ವೈಮನಸ್ಸು ಹೊಂದಿದ್ದರು  ಇವರಿಬ್ಬರು, ಭವ್ಯಾ ಅವರಿಗೆ ಕಷ್ಟಕಾಲದಲ್ಲಿ ಮೋಕ್ಷಿತಾ ಅವರು  ಸಾಂತ್ವನ  ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ ಹಾಗೂ ಮೋಕ್ಷಿತಾ ಪೈ ಮಧ್ಯೆ ಯಾವುದೂ ಸರಿ ಇರಲಿಲ್ಲ. ಅವರು ನಾಮಕಾವಸ್ತೆಗೆ ಮಾತ್ರ ಎದುರಿನಿಂದ ನಗುತ್ತಾರೆ. ಆದರೆ, ಹಿಂದಿನಿಂದ ಒಬ್ಬರಿಗೊಬ್ಬರು ಬೈದು ಕೊಳ್ಳುತ್ತಾರೆ. ಆದರೆ, ಭವ್ಯಾ ನೋವಿನಲ್ಲಿ ಇರುವಾಗ ಮೋಕ್ಷಿತಾ ಹೆಗಲುಕೊಟ್ಟಿದ್ದಾರೆ. ಅವರು ಭವ್ಯಾನ ಬಿಗಿದಪ್ಪಿ ಸಮಾಧಾನ ಮಾಡಿದ್ದಾರೆ.

ಭವ್ಯಾ ಗೌಡ ಅವರಿಗೆ ಕಳೆದ ವಾರ ಸಾಕಷ್ಟು ಹಿನ್ನಡೆಗಳು ಆದವು. ಕ್ಯಾಪ್ಟನ್ಸಿ ರೇಸ್​ನಿಂದ ಅವರು ಔಟ್ ಆದರು. ಇದಕ್ಕೆ ಮಂಜು ಅವರು ಮಾಡಿದ ಕುತಂತ್ರವೇ ಕಾರಣ. ಇದಕ್ಕೆ ಅವರು ಸಾಕಷ್ಟು ಬೇಸರಗೊಂಡರು. ಈ  ವಾರದಲ್ಲಿ  ಕಿಚ್ಚನ ಚಪ್ಪಾಳೆ ಕೂಡ ಮಿಸ್ ಆಯಿತು. ಇದಕ್ಕೆ ಭವ್ಯಾ ಗೌಡ ಅವರು ಸಾಕಷ್ಟು ನೊಂದುಕೊಂಡರು.

ಭವ್ಯಾ ಅವರು ಉತ್ತಮವಾಗಿ ಆಟ  ಆಡಿದ್ದರು ನಿಜ. ಆದರೆ, ಪ್ರಶ್ನೆ ಕೇಳುವ ಜಾಗದಲ್ಲಿ ಮೌನವಾಗಿದ್ದರು. ಇದಕ್ಕೆ ಸುದೀಪ್ ಅಸಮಾಧಾನ ಹೊರಹಾಕಿದರು. ‘ಒಂದೇ ಒಂದು ತಪ್ಪಿನಿಂದ ನಿಮಗೆ ಕಿಚ್ಚನ ಚಪ್ಪಾಳೆ ಮಿಸ್ ಆಗಿದೆ’ ಎಂದು ಹೇಳುತ್ತಿದ್ದಂತೆ ಭವ್ಯಾ ಅವರು ಕಣ್ಣೀರು ಹಾಕಿದರು. ಎಪಿಸೋಡ್ ಮುಗಿದ ಬಳಿಕವೂ ಅವರು ಅಳುತ್ತಲೇ ಇದ್ದರು.

 

Comments (0)

Your email address will not be published. Required fields are marked *

Back to top button