ಬಿಗ್ ಬಾಸ್ ಕನ್ನಡ ಸೀಸನ್ 10 : ಬಿಗ್ ಬಾ್ ಕನ್ನಡ 10 ಶೋ ಆರಂಭವಾಗಿ ಈಗಾಗಲೇ 13 ವಾರಗಳನ್ನು ಪೂರೈಸಿದ್ದು , ಈ ವಾರ ಮೈಕಲ್ ಅಜಯ್ ಅವರು ತಮ್ಮ ಆಟವನ್ನು ಅಂತ್ಯಗೊಳಿಸಿದ್ದಾರೆ. ವೀಕ್ಷಕರಿಂದ ಕಡಿಮೆ ವೋಟ್ ಪಡೆದಿರುವ ಕಾರಣ ಮೈಕಲ್ ವಿಜಯ್ ಅವರು ದೊಡ್ಡಮನೆಯಿಂದ ಹೊರಬಂದಿದ್ದಾರೆ.
ಈ ವಾರ ಕಾರ್ತಿಕ್ ಮಹೇಶ್, ವರ್ತೂರು ಸಂತೋಷ್, ಮೈಕಲ್ ಅಜಯ್, ತುಕಾಲಿ ಸಂತು,ಡ್ರೋನ್ ಪ್ರತಾಪ್ ನಾಮಿನೇಟ್ ಆಗಿದ್ದರು. ಅಂತಿಮವಾಗಿ ಈ ಐವರಲ್ಲಿ ಮೈಕಲ್ ಅಜಯ್ ಅವರು ತಮ್ಮ ಆಟವನ್ನು ಅಂತ್ಯಗೊಳಿಸಿದ್ದಾರೆ.
ಭಾನುವಾರದ ಸಂಚಿಕೆಯಲ್ಲಿ ಮೊದಲು ಡ್ರೋನ್ ಪ್ರತಾಪ್ ಮೊದಲು ಸೇಫ್ ಆದರು. ಆನಂತರ ತುಕಾಲಿ ಸಂತು ಸೇಫ್ ಆದರು . ಕೊನೆಗೆ ಸಂತೋಷ್ ಮತ್ತು ಮೈಕಲ್ ಉಳಿದುಕೊಂಡರು. ಇವರಿಬ್ಬರಲ್ಲಿ ಅಂತಿಮವಾಗಿ ಕಡಿಮೆ ವೋಟ್ ಮೈಕಲ್ ಪಡೆದ ಕಾರಣ ಅವರು ಶೋನಿಂದ ಹೊರಗೆ ಬಂದಿದ್ದಾರೆ.
ಮಾಡೇಲ್ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೈಕಲ್, ಇಲ್ಲಿಗೆ ಬಂದ ಮೇಲೆ ಕನ್ನಡ ಕಲಿತು ಜನಮನ ಗೆದ್ದರು. ಕನ್ನಡ ಮಣ್ಣಿನ ಮಗನಗಿ ಗುರುತಿಸಿಕೊಂಡರು ಸಾಕಷ್ಟು ಬಾರಿ ಬಿಗ್ ಬಾಸ್ ಶೋ ಬಂದಿದ್ದಕ್ಕೆ ಕನ್ನಡ ಕಲಿತೆ ಎಂದು ಅಭಿಮಾನದಿಂದ ಮೈಕಲ್ ಮಾತನಾಡಿದ್ದರು.
ಬಿಗ್ ಬಾಸ್ಗೆ ಕಾಲಿಟ್ಟ 6 ವಾರಗಳ ಕಾಲ ಉತ್ತಮವಾಗಿ ಮೈಕಲ್ ಆಟವಾಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ರಾಂಗ್ ಆಗಿ ವರ್ತಿಸುತ್ತಿದ್ದರು. ಬಿಗ್ ಬಾಸ್ ಆದೇಶಕ್ಕೆ ಮತ್ತು ಕ್ಯಾಪ್ಟನ್ ಸ್ಥಾನಕ್ಕೆ ಗೌರವ ಕೊಡದೇ ವರ್ತಿಸಿದರು.