ಬೆಂಗಳೂರು: ಬಿಗ್ ಬಾಸ್ ಗೆ 10 ದಿನದ ಕಾಲಾವಕಾಶ ನೀಡುವ ವಿಚಾರ ಬಗ್ಗೆ ನಾವು ತೀರ್ಮಾನ ಮಾಡಿಲ್ಲ. ನಮ್ಮ ಹತ್ತಿರ ಯಾವುದೇ ಅರ್ಜಿ ಬಂದಿಲ್ಲ. ಡಿಸಿಎಂ ಹೇಳಿರಬಹುದು, ನಮಗೆ ಮನವಿ ಬಂದಿಲ್ಲ, ಮನವಿ ಬಂದ್ರೆ ನೋಡಬಹುದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ಹೇಳಿದ್ದಾರೆ..
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮಗೆ ಬಿಗ್ ಬಾಸ್ ಈವೆಂಟ್ ಬಗ್ಗೆ ಗೊತ್ತಿಲ್ಲ. ನಾವು ಜಾಲಿವುಡ್ ಸಂಸ್ಥೆಗೆ ನೋಟಿಸ್ ಕೊಟ್ಟಿರೋದು. ಸುಮಾರು 152 ಯೂನಿಟ್‌ಗಳನ್ನು ಈಗಾಗಲೇ ರೂಲ್ಸ್ ಬ್ರೇಕ್ ಮಾಡಿದ ಕಾರಣಕ್ಕೆ ನಾವು ಕ್ಲೋಸ್ ಮಾಡುವ ಆದೇಶವನ್ನು ನೀಡಿದ್ದೇವೆ. ಹತ್ತು ದಿನದ ಕಾಲಾವಕಾಶ ಕೊಡುವ ಬಗ್ಗೆ ನಾವು ತೀರ್ಮಾನ ಮಾಡಿಲ್ಲ. ಈ ಪ್ರಕರಣ ಕೋರ್ಟ್‌ನಲ್ಲಿ ಇದೆ ಎಂದರು.
ನೋಟಿಸ್ ಕೊಟ್ಟಾಗಲು ಸ್ಪಂದಿಸಿಲ್ಲ. ಜಿಲ್ಲಾಡಳಿತ ನಮ್ಮ ಆದೇಶವನ್ನು ಪಾಲಿಸುತ್ತಿದೆ. ಮುಂದಿನ ನಿರ್ಧಾರ ನಾವೇ ತೆಗೆದುಕೊಳ್ಳಬೇಕು. ಅಮ್ಯೂಸ್‌ಮೆಂಟ್ ಪಾರ್ಕ್ ಸಮಸ್ಯೆಯಾಗಿದ್ದು. ಬಿಗ್ ಬಾಸ್ ಸ್ಟುಡಿಯೋಗೂ ಇದಕ್ಕೂ ಸಂಬಂಧ ಇರಲಿಲ್ಲ. ಜಾಲಿವುಡ್ ಬಂದ್ ಮಾಡಿರೋದು ದಿಢೀರ್ ಅಲ್ಲ. ಬಿಗ್ ಬಾಸ್‌ಗೆ ಅವರು ಮೋಸ ಮಾಡಿದ್ದಾರಾ ಗೊತ್ತಿಲ್ಲ. ನಮಗೆ ಇನ್ನೂ ಮನವಿ ಬಂದಿಲ್ಲ. ಜಿಲ್ಲಾಧಿಕಾರಿ ಗಳಿಂದ ಬಂದ ಮೇಲೆ ನೋಡೋಣ ಎಂದು ಹೇಳಿದರು.
ಜಾಲಿವುಡ್ ಮೂವತ್ತು ಎಕ್ರೆ ಪ್ರದೇಶದಲ್ಲಿದೆ. ಬಿಗ್ ಬಾಸ್ ನಡೆಯುತ್ತಿರೋದು ಒಂದು ಎಕ್ರೆ. ಅಮ್ಯೂಸ್‌ಮೆಂಟ್ ಪಾರ್ಕ್ ದೂರನ್ನು ಆಧರಿಸಿ ನೋಟಿಸ್ ಕೊಟ್ಟಿರೋದು. ಅವರು ಕನಿಷ್ಟ ಅರ್ಜಿ ಸಲ್ಲಿಕೆ ಮಾಡಿಲ್ಲ. ಇಷ್ಟು ದಿನ ಮುಚ್ಚಲು ಸಮಯಾವಕಾಶ ಯಾಕೆ? ಏಕಾಏಕಿ ಮುಚ್ಚಲು ಆಗಲ್ಲ. ಕೋರ್ಟ್ ತಪರಾಕಿ ಹಾಕಬಹುದು. ಈ ಫೈಲ್ ಪೆಂಡಿಂಗ್ ಇರೋದು ಆಗಸ್ಟ್‌ನಲ್ಲಿ ನಾನು ಅಧಿಕಾರ ವಹಿಸಿಕೊಂಡಾಗ ಗೊತ್ತಾಗಿದೆ. ನಾನು ಅಧಿಕಾರಕ್ಕೆ ಬಂದ ತಕ್ಷಣ ಕ್ರಮ ಕೈಗೊಂಡಿದ್ದೇನೆ. ಮೂರು ನೋಟಿಸ್ ಕೊಟ್ಟಿದ್ದೇವೆ. ಸ್ಪಾಟ್ ಮಹಜರು ಆಗಿದೆ. ಹತ್ತು ದಿನಗಳ ಕಾಲವಕಾಶವನ್ನು ಕೊಡಬಹುದು. ಅಫಿಡವಿಟ್ ಜೊತೆಗೆ ಮನವಿ ಪತ್ರ ಕೊಟ್ಟರೆ ಕಾಲಾವಕಾಶವನ್ನು ಕೊಡಬಹುದು. ಅಂದರೆ ಕಾನೂನಿನಲ್ಲಿ ಅವಕಾಶ ಇದೆ ಆದರೆ ಇದುವರೆಗೆ ತೀರ್ಮಾನ ಆಗಿಲ್ಲ. ರೆಡ್ ಕೆಟಗರಿ ಆಗಿರೋದ್ರಿಂದ 90 ದಿನ ಅವಕಾಶ ನೀಡಬಹುದು. ಈ ವಿಚಾರ ಈಗಾಗಲೇ ಕೋರ್ಟ್‌ನಲ್ಲಿದೆ ಎಂದು ತಿಳಿಸಿದರು.


