ಕನ್ನಡದ ಪ್ರಸಿದ್ದ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದ ಖ್ಯಾತ ಚಿತ್ರ ನಟ ಕಿಚ್ಚ ಸುದೀಪ್ ಈ ಬಾರಿ ಬಿಗ್ಬಾಸ್ ರಿಯಾಲಿಟಿ ಶೋ ನಿರೂಪಣೆಯಿಂದ ಹೊರಹೋಗುವ ಸಾಧ್ಯತೆಗಳು ಇವೆ. ಬದಲಿಗೆ ಕನ್ನಡದ ಖ್ಯಾತ ನಟರಾದ ರಮೇಶ್ ಅರವಿಂದ್, ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅಥವಾ ಕೆಜಿಎಫ್ ಖ್ಯಾತಿಯ ಯಶ್ ಅವರು ಸುದೀಪ್ ಜಾಗದಲ್ಲಿ ಬಿಗ್ ಬಾಸ್ ಆಗುವ ಸಾಧ್ಯತೆ ಇದೆ.
ರಾಜ್ಯದ ಪ್ರಮುಖ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ರಿಯಾಲಿಟಿ ಶೋ ಜನರ ಅಚ್ಚುಮೆಚ್ಚಿನ ಶೋ ಆಗಿದ್ದು, ಈ ಶೋನಲ್ಲಿ ಸಿನಿಮಾ ನಟಿಯರು, ಕಿರುತೆರೆ ನಟಿಯರು, ಕಾರ್ಯಕ್ರಮ ನಿರೂಪಕರು, ಸುದ್ದಿ ವಾಚಕರು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಖ್ಯಾತರಾಗಿರುವ ವ್ಯಕ್ತಿಗಳಿಗೆ ತಮ್ಮ ರಿಯಾಲಿಟಿ ಪ್ರದರ್ಶನದ ವೇದಿಕೆಯಾಗಿದೆ. ಮೊದಲಿನಿಂದಲೂ ಈ ಶೋನ ನಿರೂಪಣೆ ಮಾಡಿ ಜನಮನ್ನಣೆ ಪಡೆದುಕೊಂಡಿರುವ ಬಿಗ್ ಬಾಸ್-10 ಸೀಸನ್ ನಿರೂಪಕ ಪಟ್ಟ ಕೂಡ ಸುದೀಪ್ ಅವರಿಗೆ ದೊರಕಿತ್ತು. ಈಗ ಬಿಗ್ ಬಾಸ್ 11 ಸೀಸನ್ ಗೆ ಸುದೀಪ್ ಬದಲಿಗೆ ಇನ್ನೊಂದು ಮುಖ ಕಂಡುಬರಲಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ಸುದೀಪ್ ಬದಲಿಗೆ ಇತರ ಖ್ಯಾತನಾಮ ನಟರೊಬ್ಬರಿಗೆ ಬಿಗ್ ಬಾಸ್ ನಿರೂಪಕನ ಪಟ್ಟ ನೀಡಲು ಕಲರ್ಸ್ ಕನ್ನಡ ಸಿದ್ದವಾಗಿದೆ ಎನ್ನಲಾಗಿದೆ. ರಮೇಶ್ ಅರವಿಂದ್, ರಿಷಬ್ ಶೆಟ್ಟಿ ಹಾಗೂ ಯಶ್ ಅವರಲ್ಲಿ ಯಾರಾದರೊಬ್ಬರು ಸುದೀಪ್ ಜಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಅವರು ಹೆಸರೂ ಚರ್ಚೆಗೆ ಬರಲಿದೆ ಎನ್ನಲಾಗಿದೆ.