ಬೆಂಗಳೂರು : ಉಪೇಂದ್ರ ಅಂದರೆ ಯಾವಾಗಲೂ ಹೊಸದಾಗಿ ಯೋಚನೆ ಮಾಡುತ್ತಿರುತ್ತಾರೆ. ವ್ಯಾಲೆಂಟೈನ್ಸ್ ಡೇಯಂದು ಅಂದರೆ ಇದೇ ಫೆಬ್ರವರಿ 14ರಂದು ಯುಐ ಸಿನಿಮಾದ ಫಸ್ಟ್ ಸಿಂಗಲ್ ಪ್ರೋಮೋವನ್ನ ಚಿತ್ರತಂಡ ರಿಲೀಸ್ ಮಾಡುತ್ತಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿರುವ ಈ ಸಿನಿಮಾದ ಬಿಡುಗಡೆಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಉಪೇಂದ್ರ ಅವರೇ ನಿರ್ದೇಶನ ಮಾಡಿದ್ದರಿಂದ ಚಿತ್ರದಲ್ಲಿ ಹೊಸದಾಗಿ ಏನಿರಬಹುದು ಎಂಬುದು ಉಪ್ಪಿ ಫ್ಯಾನ್ಸ್ ಕುತೂಹಲವಾಗಿದೆ.