ಬೆಂಗಳೂರು: ಇತ್ತೀಚಿಗೆ ಸೈಬರ್ ವಂಚನೆ ದೊಡ್ಡ ತಲೆನೋವಾಗಿದ್ದು, ಜನ ಸಾಮಾನ್ಯರಷ್ಟೇ ಅಲ್ಲದೇ ಸ್ಟಾರ್ ನಟರು, ರಾಜಕಾರಣಿಗಳು ಕೂಡ ಈ ಜಾಲದಲ್ಲಿ ಸಿಲುಕುವಂತಾಗಿದೆ.. ಇದೀಗ ಚಿಕ್ಕಬಳ್ಳಾಪುರ ಸಂಸದ ಕೆ. ಸುಧಾಕರ್ ಪತ್ನಿ ಡಾ.ಪ್ರೀತಿ ಸುಧಾಕರ್ ಅವರಿಗೆ ಡಿಜಿಟಲ್ ಅರೆಸ್ಟ್ ಮಾಡಲಾಗಿದೆ..
ಡಾ. ಪ್ರೀತಿ ಸುಧಾಕರ್ ಅವರಿಗೆ 14 ಲಕ್ಷ ಸೈಬರ್ ವಂಚನೆಯಾಗಿದೆ. ಆಗಸ್ಟ್ 26 ರಂದು ಡಾ. ಪ್ರೀತಿ ಸುಧಾಕರ್ ಅವರಿಗೆ ಬೆಳಗ್ಗೆ 9:30ಕ್ಕೆ ಸೈಬರ್ ವಂಚಕರು ಕರೆ ಮಾಡಿ, ನಾವು ಮುಂಬೈ ಸೈಬರ್ ಡಿಪಾರ್ಟ್ಮೆಂಟ್ ಸಿಬ್ಬಂದಿ ಎಂದು ಹೇಳಿದ್ದಾರೆ.
ನಿಮ್ಮ ದಾಖಲೆಗಳನ್ನ ಸದ್ಭತ್ ಖಾನ್ ಎಂಬ ಅಪರಿಚಿತ ವ್ಯಕ್ತಿ ಬಳಸಿಕೊಂಡಿದ್ದಾನೆ. ನಿಮ್ಮ ಹೆಸರಲ್ಲಿ ಕ್ರೆಡಿಟ್ ಕಾರ್ಡ್ ಮಾಡಿಸಿ ಅಕ್ರಮ ಟ್ರನ್ಸಾಕ್ಷನ್ ನಡೆಸಿದ್ದಾನೆ. ವಿದೇಶಕ್ಕೆ ಕಾನೂನು ಬಾಹಿರ ಚಟುವಟಿಕೆ ನಡೆಸಲು ಜನರನ್ನ ಕಳುಹಿಸಿದ್ದಾನೆ. ಸದ್ಬತ್ ಖಾನ್ ನ ಅರೆಸ್ಟ್ ಮಾಡಲಾಗಿದೆ. ಆತನ ಹೇಳಿಕೆಯಲ್ಲಿ ನಿಮ್ಮ ಹೆಸರಿನ ದಾಖಲೆಯಿದೆ. ಇದರ ವಿಚಾರಣೆ ನಡೆಸೋದಕ್ಕೆ ವಿಡಿಯೋ ಕಾಲ್ ಮಾಡಿದ್ದೀವಿ.
ಆತ ನಿಮ್ಮ ದಾಖಲೆ ಹಾಗೂ ವೈಯಕ್ತಿಕ ದಾಖಲೆಗಳನ್ನ ರದ್ದು ಮಾಡೋದಾಗಿ ಬೆದರಿಕೆ ಹಾಕಿದ್ದ. ನಿಮ್ಮ ಅಕೌಂಟ್ ಅಕ್ರಮ ಆಗಿದ್ದು ಹಣ ಹಾಕಿ ಎಂದು ಬೆದರಿಕೆ ಹಾಕಿದ್ದಾನೆ. ಪರಿಶೀಲನೆ ಮಾಡೋದಾಗಿ ಪ್ರೀತಿ ಅವ್ರಿಂದ 14 ಲಕ್ಷ ಹಣ ಹಾಕಿಸಿಕೊಂಡಿದ್ದಾರಂತೆ. ಆರ್ ಬಿಐ ರೂಲ್ಸ್ ಪರಿಶೀಲನೆ ಮಾಡಿ 45 ನಿಮಿಷದಲ್ಲಿ ವಾಪಸ್ ಹಾಕೋದಾಗಿ ಹೇಳಿದ್ದಾರಂತೆ. ಬಳಿಕ ಪ್ರೀತಿ ಸುಧಾಕರ್ ಅವರಿಂದ 14 ಲಕ್ಷ ಹಣವನ್ನ ವಂಚಕರು ಆರ್ ಟಿಜಿಎಸ್ ಮಾಡಿಸಿಕೊಂಡಿದ್ದಾರೆ.
ಹಣ ಹಾಕಿದ ನಂತರ ವಂಚನೆಯಾಗಿರೋದು ಪತ್ತೆಯಾಗಿದೆ. ಈ ಬಗ್ಗೆ ಪಶ್ಚಿಮ ಸೆನ್ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ರು. ದೂರಿನ ಮೇರೆಗೆ ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತನಿಖೆ ನಡೆಸಿ ಪೊಲೀಸರು ಸೈಬರ್ ವಂಚಕರಿಗಾಗಿ ಬಲೆ ಬೀಸಿದ್ರು.


