#Exclusive NewsTop Newsರಾಜ್ಯಸುದ್ದಿ

AE ಗೆ ಭರ್ಜರಿ ಗಿಫ್ಟ್ -ಬಿಡಿಎ ಎಂಜಿನಿಯರ್ ಗಳ ಅಸಮಾಧಾನ..!

ಬೆಂಗಳೂರು: ಬಿಡಿಎನಲ್ಲಿ ಅಧ್ವಾನಗಳ ಮೇಲೆ ಅಧ್ವಾನಗಳು ಜರಗುತ್ತಿರುವ ಬಗ್ಗೆ ದೂರುಗಳ ಸುರಿಮಳೆ ಮುಂದುವರದಿದೆ. ಸಹಾಯಕ ಇಂಜಿನಿಯರ್‌ ನವೀನ್ ಎಂಬುವರಿಗೆ ಒಂದಕ್ಕಿಂತ ಹಲವು ಹುದ್ದೆ ನೀಡಿರುವುದು ಇತರರ ಇಂಜಿನಿಯರ್ ಅಸಮಾಧಾನಕ್ಕೆ ಕಾರಣವಾಗಿದೆ. ನವೀನ್ ಅವರಿಗೆ ಚಿಕ್ಕಬಾಣವಾರ ಕೆರೆ ಅಭಿವೃದ್ಧಿ ಹಾಗೂ ಡಾ.ಶಿವರಾಮ ಕಾರಂತ ಬಡಾವಣೆ ಉಸ್ತುವಾರಿ ನೀಡಲಾಗಿದೆ.

ಈ ಎರಡು ಪೋಸ್ಟ್ ಗಳಲ್ಲಿ ದೊಡ್ಡ ಮಟ್ಟದ ಕಾಮಗಾರಿ ನಡೆಯುತ್ತಿವೆ‌. ಪ್ರಾಧಿಕಾರದಲ್ಲೇ ಹಲವು ಇಂಜಿನಿಯರ್ ಗಳು ಇದ್ರೂ ನವೀನ್ ಅವರಕ್ಕಿಂತ ಹೆಚ್ಚಿನ ಅನುಭವ ಇದ್ರೂ ಅವರನ್ನು ನಿರ್ಲಕ್ಷಿಸಿ ನವೀನ್​ಗೆ ಹೆಚ್ಚುವರಿ ಹುದ್ದೆ ನೀಡಲಾಗಿದೆ. ಇನ್ನೊಂದು ವಿಶೇಷ ಏನಂದ್ರೆ ಪ್ರಾಧಿಕಾರ ಅಧಿಕಾರಿ ಅಲ್ಲದಿದ್ರೂ ಇವರಿಗೆ AEE ಹುದ್ದೆ ಉಸ್ತುವಾರಿ ಸಹ ನೀಡಿದ್ದು, ಇತರರ ಇಂಜಿನಿಯರ್ ಗಳ ಅಸಮಾಧಾನಕ್ಕೆ ಕಾರಣವಾಗಿದೆ. ವಿವಿಧ ರೀತಿಯ ಪ್ರಭಾವ ಬಳಸಿದವರಿಗೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಲ್ಲಿ  ಹೆಚ್ಚಿನ ಹುದ್ದೆಗಳು ಸಿಗುತ್ತಿವೆ ಎಂಬ ಟೀಕೆ ವ್ಯಕ್ತವಾಗಿದೆ.

Comments (0)

Your email address will not be published. Required fields are marked *

Back to top button