Wednesday, January 28, 2026
16.4 C
Bengaluru
Google search engine
LIVE
ಮನೆ#Exclusive NewsTop Newsಬಿಗ್ ಬಾಸ್​ಗೆ ಗುಡ್​ ಬೈ ಹೇಳಿದ ಕಿಚ್ಚ! ಸುದೀಪ್‌ ಭಾವುಕ ಪೋಸ್ಟ್‌

ಬಿಗ್ ಬಾಸ್​ಗೆ ಗುಡ್​ ಬೈ ಹೇಳಿದ ಕಿಚ್ಚ! ಸುದೀಪ್‌ ಭಾವುಕ ಪೋಸ್ಟ್‌

ಬಿಗ್ ಬಾಸ್​ ಕಾರ್ಯಕ್ರಮ ಅಂದ್ರೆ ಕನ್ನಡಿಗರಿಗೆ ನೆನಪಾಗೋದು ಕಿಚ್ಚ ಸುದೀಪ್ ಮಾತ್ರ, ಸ್ಪರ್ಧಿಗಳು ಯಾರೇ ಆಗಿರಲಿ, ಆಟ ಏನೇ ಇರಲಿ, ಬಹುತೇಕ ಪ್ರೇಕ್ಷಕರು ಕಾಯೋದು ಶನಿವಾರ ಹಾಗೂ ಭಾನುವಾರ ನಡೆಯೋ ಕಿಚ್ಚನ ಪಂಚಾಯಿತಿಗಾಗಿಯೇ. ಸುದೀಪ್ ಅವರ ಖಡಕ್ ಮಾತು, ವಾರ್ನಿಂಗ್ ಕೊಡುವ ಶೈಲಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬಿಗ್ ಬಾಸ್ ಅಂದ್ರೆ ಸುದೀಪ್ ಎನ್ನುವ ಜನ.. ಕಿಚ್ಚನಿಲ್ಲದ ಬಿಗ್ ಬಾಸ್ ಖಾಲಿ ಅಂತಿದ್ದಾರೆ. ​ಇದೀಗ ಬಿಗ್​ ಬಾಸ್ ಜರ್ನಿ ನಿಲ್ಲಿಸುವ ನಿರ್ಧಾರಕ್ಕೆ ಕಿಚ್ಚ ಸುದೀಪ್ ಬಂದಿದ್ದಾರೆ. ಟ್ವೀಟ್ ಮೂಲಕ ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ.

ಕಳೆದ 11 ಸೀಸನ್‌ಗಳಿಂದ ನಾನು ‘ಬಿಗ್ ಬಾಸ್‌’ ಕಾರ್ಯಕ್ರಮವನ್ನ ಖುಷಿಯಿಂದ ನಡೆಸಿಕೊಟ್ಟಿದ್ದೇನೆ. ನೀವೆಲ್ಲರೂ ತೋರಿದ ಪ್ರೀತಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಹೋಸ್ಟ್ ಆಗಿ ನಾನು ನಡೆಸಿಕೊಡುವ ಕಡೆಯ ಫಿನಾಲೆ ಇದು. ನಿಮ್ಮೆಲ್ಲರಿಗೂ ಮನರಂಜನೆ ನೀಡಲು ನಾನು ನನ್ನ ಬೆಸ್ಟ್ ನೀಡುತ್ತೇನೆ. ಇದು ಖಂಡಿತವಾಗಿಯೂ ಅವಿಸ್ಮರಣೀಯ ಪಯಣ. ಈ ಕಾರ್ಯಕ್ರಮವನ್ನ ನನ್ನ ಕೈಲಾದಷ್ಟು ಅತ್ಯುತ್ತಮವಾಗಿ ನಿಭಾಯಿಸಿದ್ದಕ್ಕೆ ನನಗೆ ಖುಷಿಯಿದೆ. ಈ ಅವಕಾಶ ಕೊಟ್ಟ ಕಲರ್ಸ್ ಕನ್ನಡ ವಾಹಿನಿಗೆ ನನ್ನ ಧನ್ಯವಾದಗಳು’’ ಎಂದು ಎಕ್ಸ್‌ನಲ್ಲಿ ಕಿಚ್ಚ ಸುದೀಪ್‌ ಪೋಸ್ಟ್ ಮಾಡಿದ್ದಾರೆ. ಕಿಚ್ಚ ಸುದೀಪ್‌ ಅವರ ಈ ಪೋಸ್ಟ್ ವೈರಲ್ ಆಗಿದೆ.


ಇದು ಅತ್ಯುತ್ತಮ ನಿರ್ಧಾರ. ಈ ಕೂಡಲೆ BRB ಶೂಟಿಂಗ್ ಶುರು ಮಾಡಿ’’ ಅಂತ ಕೆಲವರು ಪೋಸ್ಟ್ ಮಾಡುತ್ತಿದ್ದಾರೆ. ‘’ರಿಯಾಲಿಟಿ ಶೋಗಳಿಗೆ ಇವರೇ ಸೂಕ್ತ : ಕನ್ನಡದ ಕೋಟ್ಯಧಿಪತಿ = ಅಪ್ಪು, ವೀಕೆಂಡ್ = ರಮೇಶ್ ಸರ್, ಕಾಮಿಡಿ ಖಿಲಾಡಿಗಳು = ಜಗ್ಗೇಶ್ ಸರ್, ಬಿಗ್ ಬಾಸ್ = ಸುದೀಪ್ ಸರ್. 11 ವರ್ಷಗಳ ನಿರೂಪಣೆ ಅತ್ಯುತ್ತಮವಾಗಿತ್ತು. ನೀವು ವಾಪಸ್ ಬರಲಿ ಅಂತ ನಾವು ಆಶಿಸುತ್ತಿದ್ದೇವೆ’’ ಅಂತ ಬಿಗ್ ಬಾಸ್ ಫ್ಯಾನ್ಸ್ ಒತ್ತಾಯಿಸುತ್ತಿದ್ದಾರೆ.

ಭಾರತೀಯ ಕಿರುತೆರೆ ಕಂಡ ಬೆಸ್ಟ್ ಹೋಸ್ಟ್ ನೀವು’’, ‘’ನಿಮಗೆ ಸರಿಸಾಟಿ ಯಾರೂ ಇಲ್ಲ’’, ‘’ಬಿಗ್ ಬಾಸ್‌’ನ ನಾವು ನೋಡ್ತಾ ಇದ್ದಿದ್ದಕ್ಕೆ ಕಾರಣವೇ ನೀವು. ನೀವಿಲ್ಲದೆ ಬಿಗ್ ಬಾಸ್‌ನ ನಾವು ಕಲ್ಪನೆ ಮಾಡಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಮಿಸ್ ಯೂ ಎ ಲಾಟ್ ಬಾಸ್’’, ‘’ನಿಮ್ಮ ತಾಯಿಯ ಅಚ್ಚುಮೆಚ್ಚಿನ ಶೋನ ನೀವು ಅಷ್ಟು ಸುಲಭವಾಗಿ ಬಿಡೋದಿಲ್ಲ ಅಂತ ನಮಗೂ ಗೊತ್ತು’’ ಅಂತ ಕೆಲವರು ಟ್ವೀಟ್ ಮಾಡುತ್ತಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments