ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿನ ದೇಶೀಯ ನಿರ್ಗಮನ ಪ್ರದೇಶದಲ್ಲಿರುವ 080 ಲಾಂಜ್ ‘ಅತ್ಯುತ್ತಮ ದೇಶಿಯ ವಿಮಾನ ನಿಲ್ದಾಣ ಲಾಂಜ್’ ಮತ್ತು ‘ಮೆಚ್ಚಿನ ವಿಮಾನ ನಿಲ್ದಾಣ ಲಾಂಜ್’ ಪ್ರಶಸ್ತಿಗೆ ಭಾಜನವಾಗಿದೆ.ಟ್ರಾವೆಲ್ ಹಾಗೂ ಲೀಶರ್‌ಇಂಡಿಯಾವು ‘ಅತ್ಯುತ್ತಮ ದೇಶೀಯ ಏರ್‌ಪೋರ್ಟ್ ಲಾಂಜ್’ ಹಾಗೂ ಕಾಂಡೆ ನಾಸ್ಟ್ ರೀಡರ್ಸ್ ಚಾಯ್ಸ್ ಅವಾರ್ಡ್ ನಿಂದ ‘ಮೆಚ್ಚಿನ ವಿಮಾನ ನಿಲ್ದಾಣ ಲಾಂಜ್’ ಪ್ರಶಸ್ತಿ ಲಭಿಸಿದೆ.
ಪ್ರಯಾಣ ಮತ್ತು ಆತಿಥ್ಯ ಉದ್ಯಮದಲ್ಲಿನ ಅತ್ಯುತ್ತಮ ಸಂಸ್ಥೆಗಳನ್ನು ಓದುಗರ ಮೂಲಕ ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.ಈ ಬಗ್ಗೆ ಹೇಳಿಕೆ ನೀಡಿರುವ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್, ಈ ಮನ್ನಣೆ ಪ್ರಶಂಸನೀಯವಾಗಿದೆ. ಮುಂದಿನ ದಿನಗಳಲ್ಲಿ ವ್ಯವಸ್ಥೆಯನ್ನು ಇನ್ನಷ್ಟು ಉನ್ನತೀಕರಿಸಲು ಪ್ರೇರಣೆ ನೀಡಿದಂತಾಗಿದೆ. ಟರ್ಮಿನಲ್ 2 ಆರಂಭಗೊಂಡ ಬಳಿಕ ನೀಡುತ್ತಿರುವ ಸೇವೆಗೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ ಎಂದು ತಿಳಿಸಿದ್ದಾರೆ.