ಬೆಸ್ಕಾಂ ನಲ್ಲಿ ನಿವೃತ್ತ ಚೀಫ್ ಫೈನಾನ್ಸಿಯಲ್ ಅಡ್ವೈಸರ್ ತಿಮ್ಮೇಗೌಡ ಅವರ ತಾಯಿ ಶ್ರೀಮತಿ ಚೆನ್ನಮ್ಮ ನಿಧನರಾಗಿದ್ದಾರೆ. 94 ವರ್ಷ ಚೆನ್ನಮ್ಮ ವಯಸ್ಸಾಗಿತ್ತು. ಚನ್ನಮ್ಮ ಅವರು ಹಾಗೂ ಕುಟುಂಬಸ್ಥರ ಆಸೆಯಂತೆ ನಿಧನ ನಂತರ ಚೆನ್ನಮ್ಮ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ನೀಡಲಾಯಿತು. ಇಂದು ಸಂಜೆ ಮದ್ದೂರು ತಾಲೂಕಿನ ವಿಲವಾಗಿಲು ಗ್ರಾಮದಲ್ಲಿ ಅಂತಿಮ ಕಾರ್ಯ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


