Tuesday, January 27, 2026
20.2 C
Bengaluru
Google search engine
LIVE
ಮನೆ#Exclusive NewsTop Newsನಟ ದರ್ಶನ್‌ ತೂಗುದೀಪಗೆ ಮತ್ತೆ ನಿರಾಸೆ! ಕೋರ್ಟ್‌ನಿಂದ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ನಟ ದರ್ಶನ್‌ ತೂಗುದೀಪಗೆ ಮತ್ತೆ ನಿರಾಸೆ! ಕೋರ್ಟ್‌ನಿಂದ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದೆ. ಈ ಹಿಂದೆ ಕೆಲವು ಬಾರಿ ಅರ್ಜಿ ವಿಚಾರಣೆ ವಿವಿಧ ಕಾರಣಗಳಿಗೆ ಮುಂದೂಡಲಾಗಿತ್ತು. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಹಿರಿಯ ವಕೀಲ ಸಿಎನ್ ನಾಗೇಶ್ ಅವರು ಇಂದು ದರ್ಶನ್ ಪರ ವಾದ ಮಂಡಿಸಿದರು. ಕಳೆದ ಎರಡು ವಾರದಿಂದಲೂ ದರ್ಶನ್​ಗೆ ಜಾಮೀನು ಅರ್ಜಿ ಮುಂದೂಡಿಕೆ ಆಗುತ್ತಲೇ ಬಂದಿದ್ದು, ಇಂದು ಕೊನೆಗೂ ಸಿವಿ ನಾಗೇಶ್ ಅವರು ದರ್ಶನ್ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ದಿನದ ಅಂತ್ಯಕ್ಕೆ ಪ್ರಕರಣದ ವಿಚಾರಣೆಯನ್ನು ನಾಳೆ (ಅಕ್ಟೋಬರ್ 05) ಮಧ್ಯಾಹ್ನ 12:30ಕ್ಕೆ ಮುಂದೂಡಿಕೆ ಮಾಡಲಾಯ್ತು.

ಕೊಲೆ ಪ್ರಕರಣದ ಆರೋಪಿಗಳಾದ ಎ2 ದರ್ಶನ್‌ ಹಾಗೂ ಎ1 ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆಯು 57ನೇ ಸೆಷನ್ ಕೋರ್ಟ್‌ನಲ್ಲಿ ನಡೆಯಿತು. ಇದೇ ವೇಳೆ ಪವಿತ್ರಾಗೌಡ ಅವರ ಜಾಮೀನು ಅರ್ಜಿಯನ್ನೂ ಕೋರ್ಟ್‌ ಮುಂದೂಡಿತು. ದರ್ಶನ್‌ ಪರವಾಗಿ ಹಿರಿಯ ವಕೀಲ ಸಿ.ವಿ ನಾಗೇಶ್ ಪ್ರಬಲ ವಾದ ಮಂಡಿಸಿದರು.

ಕೊನೆಯಲ್ಲಿ ರಿಕವರಿ ಮತ್ತು ಸ್ವಇಚ್ಚಾ ಹೇಳಿಕೆಯ ಸಂದೇಹ & ವ್ಯತ್ಯಾಸಗಳ ಬಗ್ಗೆ ಸಿ.ವಿ ನಾಗೇಶ್ ವಾದ ಮಂಡಿಸಿದರು. ಇಲ್ಲಿ ಪೊಲೀಸ್ ರಿಕವರಿ ಸ್ವೀಕರಿಸುವಂತಹದ್ದು ಅಲ್ಲ, ಹೇಳಿಕೆಯೂ ಸಹ ಸ್ವಿಕರಿಸುವಂತಹದ್ದಲ್ಲ. ಇಲ್ಲಿ ಸಮಾನ್ಯ ನಿಯಮವನ್ನು ಪೊಲೀಸರು ಅನುಸರಿಸಬೇಕು. ಸಾಕ್ಷಿಯೂ ಪ್ಲಾಂಟೆಂಡ್ ಸಾಕ್ಷಿಯಾಗಿದೆ. 37 ಲಕ್ಷ ಹಣವನ್ನು ಸೀಜ್‌ ಮಾಡಿದ್ದಾರೆ. ಸಾಕ್ಷಿಗಳ ಕೊಂಡುಕೊಳ್ಳಲು ಹಣ ಬೇಕು ಎಂದಿದ್ದಾರೆ ಎಂದು ಹೇಳಿ ನಾಳೆಗೆ ವಾದ ಮುಂದುವರಿಸುತ್ತೇನೆ ಎಂದು ಹೇಳಿದರು.

ಇದಕ್ಕೆ ಜಡ್ಜ್‌ ಎಸ್‌ಪಿಪಿ ನೀವು ವಾದ ಮಾಡ್ತೀರಾ ಎಂದು ಪ್ರಶ್ನೆ ಮಾಡಿದರು, ಜಡ್ಜ್‌ ಪ್ರಶ್ನೆಗೆ ಉತ್ತರಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್‌, ಎಲ್ಲರದ್ದೂ ಮುಗಿದ ಮೇಲೆ ನಾನು ವಾದ ಮಾಡ್ತೀನಿ ಎಂದರು. ನಂತರ ಜಡ್ಜ್‌ ಶನಿವಾರ ಮಧ್ಯಾಹ್ನ 12:30ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿ ಆದೇಶಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments