ಬೆಂಗಳೂರು: ನಾಗಸಂಧ್ರದಿಂದ ಮಾದಾವರಗೆ ಹೋಗುವ ಮೆಟ್ರೋ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಬಿಬಿಎಂಪಿಗೆ ಬಿಎಂಆರ್‌ಸಿಎಲ್ ಪತ್ರ ಬರೆದು ಸೂಚನೆ ನೀಡಿದೆ.
ಮೆಟ್ರೋ ಸಂಚಾರಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅನುಮತಿಗಾಗಿ ಬಿಎಂಆರ್‌ಸಿಎಲ್ ಪತ್ರ ಬರೆದಿದೆ. ಈ ತಿಂಗಳ ಅಂತ್ಯದ ಒಳಗಡೆ ಉದ್ಘಾಟನೆ ಮಾಡಲು ಮುಂದಾಗಿದ್ದು, ಹಸಿರು ಮಾರ್ಗದ ವಿಸ್ತರಣೆ ಭಾಗ ಉದ್ಘಾಟನೆಗೆ ಬಿಎಂಆರ್‌ಸಿಎಲ್ ತಯಾರಿ ಮಾಡಿಕೊಂಡಿದೆ.
ಸದ್ಯ ಎಲ್ಲಾ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದ್ದು, ಈಗಾಗಲೇ ಎಲ್ಲಾ ಪರೀಕ್ಷೆಗಳನ್ನು ಮಾಡಲಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಆ.3 ರಂದು ಮಾರ್ಗವನ್ನು ಪರಿಶೀಲಿಸಿ ವಾಣಿಜ್ಯ ಕಾರ್ಯಾಚರಣೆಗೆ ಅನುಮೋದನೆ ನೀಡಲಾಗಿದೆ.
ಈ ತಿಂಗಳ ಅಂತ್ಯದಲ್ಲಿ ಉದ್ಘಾಟನೆ ದಿನಾಂಕ ನಿಗದಿಯಾಗಲಿದೆ. ಗ್ರೀನ್ ಲೈನ್‌ನ 3.7 ಕಿ.ಮೀ. ಉದ್ದದ ವಿಸ್ತೃತ ಮಾರ್ಗ ಇದಾಗಿದೆ. ಮಂಜುನಾಥ ನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ಮೂರು ನಿಲ್ದಾಣಗಳನ್ನ ಒಳಗೊಂಡಿದೆ.
ಉದ್ಘಾಟನೆ ದಿನಾಂಕ ನಿಗದಿಗಾಗಿ ನಗರಾಭಿವೃದ್ಧಿ ಇಲಾಖೆಯೊಂದಿಗೆ ಬಿಎಂಆರ್‌ಸಿಎಲ್ ಮಾತುಕತೆ ನಡೆಸುತ್ತಿದೆ. ಈ ತಿಂಗಳ ಕೊನೆಯಲ್ಲಿ ಒಂದು ದಿನ ವಿಸ್ತೃತ ಮಾರ್ಗ ಉದ್ಘಾಟನೆ ಆಗಲಿದೆ.


