Top Newsಮನರಂಜನೆಸುದ್ದಿ

BBK 11: ‘ಬಿಗ್​ಬಾಸ್’ ಮನೆಗೆ ಹಂಸಾ, ಮೋಕ್ಷಿತಾ, ಐಶ್ವರ್ಯಾ, ಚೈತ್ರಾ, ಮಂಜು ಗ್ರ್ಯಾಂಡ್ ಎಂಟ್ರಿ

ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ 11ಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಹಂಸಾ, ಐಶ್ವರ್ಯಾ, ಮೋಕ್ಷಿತಾ ಪೈ, ಉಗ್ರಂ ಖ್ಯಾತಿಯ ಮಂಜು, ರಂಜಿತ್‌ ಕುಮಾರ್‌ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಒಟ್ಟು ಬಿಗ್‌ ಬಾಸ್‌ಗೆ 17 ಸ್ಪರ್ಧಿಗಳ ಆಗಮನವಾಗಿದೆ.

ದೊಡ್ಮನೆ ಆಟಕ್ಕೆ ಇಂದು (ಸೆ.29) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಕಿರುತೆರೆ ನಟಿ ಹಂಸಾ, ನಾಗಿಣಿ 2 ಖ್ಯಾತಿಯ ಐಶ್ವರ್ಯಾ ಸಿಂದೋಗಿ, ಪಾರು ಖ್ಯಾತಿಯ ಮೋಕ್ಷಿತಾ ಪೈ, ಶನಿ ಸೀರಿಯಲ್‌ನ ರಂಜಿತ್‌ ಕುಮಾರ್‌, ಚೈತ್ರಾ ಕುಂದಾಪುರ, ಉಗ್ರಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಮಂಜು ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ.

ದೊಡ್ಮನೆಯಲ್ಲಿ ಈಗ ಸ್ವರ್ಗ ಮತ್ತು ನರಕ ಎಂದು ಎರಡು ತಂಡಗಳಾಗಿ ಮಾಡಿ ಅದರಲ್ಲಿ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ ಬಾಸ್‌ ಮನೆಯ ಆಟದ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡಿಸಿದೆ. ಭವ್ಯಾ ಗೌಡ, ಯಮುನಾ, ಮಾನಸಾ, ತ್ರಿವಿಕ್ರಮ್‌, ಶಿಶಿರ್‌ ಶಾಸ್ತ್ರಿ, ಅನುಷಾ ರೈ, ಧರ್ಮ ಕೀರ್ತಿರಾಜ್‌, ಧನರಾಜ್‌, ಗೋಲ್ಡ್‌ ಸುರೇಶ್‌,ಗೌತಮಿ ದೊಡ್ಮನೆಯ ಸ್ಪರ್ಧಿಗಳಾಗಿದ್ದಾರೆ. ಪ್ರತಿದಿನ ರಾತ್ರಿ 9:30 ಶೋ ಪ್ರಸಾರವಾಗಲಿದೆ.

Comments (0)

Your email address will not be published. Required fields are marked *

Back to top button