Wednesday, January 28, 2026
23.8 C
Bengaluru
Google search engine
LIVE
ಮನೆ#Exclusive NewsTop Newsಒಂದು ವಾರದಲ್ಲೆ 110 ಗ್ರಾಮಕ್ಕೆ ಕಾವೇರಿ ನೀರು-5ನೇ ಹಂತದ ಚಾಲನೆಗೆ ಸಕಲ ಸಿದ್ದತೆ

ಒಂದು ವಾರದಲ್ಲೆ 110 ಗ್ರಾಮಕ್ಕೆ ಕಾವೇರಿ ನೀರು-5ನೇ ಹಂತದ ಚಾಲನೆಗೆ ಸಕಲ ಸಿದ್ದತೆ

ಬೆಂಗಳೂರು: 17 ವರ್ಷಗಳ ಹಿಂದೆ ಬಿಬಿಎಂಪಿ ತೆಕ್ಕೆ ಸೇರಿದ 110 ಹಳ್ಳಿಗಳ ಜನರಿಗೆ ಕೊನೆಗೂ ಕಾವೇರಿ ನೀರು ಕುಡಿಯುವ ಭಾಗ್ಯ ಬಂದೊದಗಿದೆ. ಕಾವೇರಿ 5ನೇ ಹಂತದ ಯೋಜನೆಯಡಿ ನೀರು ಪೂರೈಸಲು ಜಲಮಂಡಳಿ ಸಜ್ಜಾಗಿದ್ದು, ಮುಂದಿನ ವಾರ ಕಾವೇರಿ 5 ಹಂತ ಯೋಜನೆಗೆ ಸರಕಾರದಿಂದಲೇ ಹಸಿರು ನಿಶಾನೆ ತೋರಲಿದೆ.

110 ಹಳ್ಳಿಗಳಿಗೆ ಜೂನ್‌ ಅಂತ್ಯದೊಳಗೆ ಕಾವೇರಿ ನೀರು ಪೂರೈಸುವುದಾಗಿ ಭರವಸೆ ನೀಡಿತ್ತು. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರ, ಅಸ್ಸಾಂ, ಆಂಧ್ರಪ್ರದೇಶ ಮೂಲದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದರು. ಹೀಗಾಗಿ, ಕಾಮಗಾರಿ ಕೊಂಚ ವಿಳಂಬವಾಗಿತ್ತು. ಕಾರ್ಮಿಕರು ವಾಪಸ್ಸಾದ ನಂತರ ಕಾಮಗಾರಿಯನ್ನು ಚುರುಕುಗೊಳಿಸಿ ಪೂರ್ಣಗೊಳಿಸಲಾಗಿದೆ.

ಹಾಗಾಗಿ ಮುಂದಿನ ವಾರದಿಂದಲ್ಲೇ ಬೆಂಗಳೂರು ಹೊರವಲಯದ ಜನರಿಗೆ ನೀರಿನ ದಾಹ ತಣಿಸಲು ಕಾವೇರಿ ಐದನೆ ಹಂತವು ಸಿದ್ದವಾಗಿದೆ. ಸೋಮವಾರ ಬೆಂಗಳೂರು ನಗರಾಭಿವೃದ್ಧಿ ಸಚಿವರಿಂದ ಕಾವೇರಿ ಐದನೇ ಹಂತದ ಯೋಜನೆ ಪರಿಶೀಲನೆ ನಡೆಯಲಿದ್ದು, ಬಳಿಕ ಐದನೇ ಹಂತದ ಯೋಜನೆಗೆ ಚಾಲನೆ ಆಗಲಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ವಿ. ಅವರು ತಿಳಿಸಿದರು.

110 ಹಳ್ಳಿಗಳಿಗೆ ಜೂನ್‌ ಅಂತ್ಯದೊಳಗೆ ಕಾವೇರಿ ನೀರು ಪೂರೈಸುವುದಾಗಿ ಭರವಸೆ ನೀಡಿತ್ತು. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರ, ಅಸ್ಸಾಂ, ಆಂಧ್ರಪ್ರದೇಶ ಮೂಲದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದರು. ಹೀಗಾಗಿ, ಕಾಮಗಾರಿ ಕೊಂಚ ವಿಳಂಬವಾಗಿತ್ತು. ಕಾರ್ಮಿಕರು ವಾಪಸ್ಸಾದ ನಂತರ ಕಾಮಗಾರಿಯನ್ನು ಚುರುಕುಗೊಳಿಸಿ ಪೂರ್ಣಗೊಳಿಸಲಾಗಿದೆ.

ಆಗಸ್ಟ್ ತಿಂಗಳು ಪೂರ್ತಿ ಟ್ರಯಲ್ ರನ್ ಮಾಡಲಾಗಿದ್ದು, 110 ಹಳ್ಳಿಗಳಿಗೆ ಅಳವಡಿಸಿರುವ ನೂರಾರು ಕಿಲೋ ಮೀಟರ್ ಉದ್ದದ ಕೊಳವೆಗಳನ್ನು ಹಂತ ಹಂತವಾಗಿ ಪರೀಕ್ಷಿಸಲಾಗುತ್ತಿದೆ. ಬಹುತ್ತೇಕ ಕಡೆ ಕೊಳವೆಗಳಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ. ನೀರು ಹರಿಸಲು ಯೋಗ್ಯವಾಗಿದೆ ಎಂದು ಎಂಜಿನಿಯರ್​ಗಳು ತಿಳಿಸಿದ್ದಾರೆ.

ಸದ್ಯ 55 ಸಾವಿರ ಸಂಪರ್ಕ:

ಕಾವೇರಿ 5ನೇ ಹಂತದ ಯೋಜನೆಯಡಿ 110 ಹಳ್ಳಿಗಳಿಗೆ ನಿತ್ಯ 775 ಎಂಎಲ್‌ಡಿ ನೀರು ಪೂರೈಕೆಯಾಗಲಿದೆ. ಒಟ್ಟು 5 ಲಕ್ಷ ಸಂಪರ್ಕ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ ಮೊದಲ ಹಂತದಲ್ಲಿ 55 ಸಾವಿರ ಸಂಪರ್ಕ ನೀಡಲಾಗಿದೆ. ಕಾವೇರಿ ನೀರಿನ ಸದ್ಭಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಸಂಪರ್ಕ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದೆ.

ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಹಂತ ಹಂತವಾಗಿ ಐದನೇ ಹಂತ ಯೋಜನೆಗಳನ್ನು ಸರ್ಕಾರ ಮಾಡಿದೆ. 2017ರಲ್ಲಿ ಕಾವೇರಿ 5ನೇ ಹಂತದ ಯೋಜನೆಗೆ 5,550 ಕೋಟಿ ರೂ. ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ‘ಜೈಕಾ’ದಿಂದ 4,661 ಕೋಟಿ ರೂ. ಸಾಲ ಪಡೆಯಲಾಗಿದೆ. ರಾಜ್ಯ ಸರಕಾರ 444.50 ಕೋಟಿ ರೂ. ಮತ್ತು ಜಲಮಂಡಳಿ 444.50 ಕೋಟಿ ರೂ. ವೆಚ್ಚ ಭರಿಸಿವೆ.

2019ರಲ್ಲಿ ಆರಂಭಗೊಂಡ ಕಾವೇರಿ ಐದನೇ ಹಂತದ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ವಾರದಿಂದ 110 ಹಳ್ಳಿಗಳಿಗೆ ಕಾವೇರಿ ನೀರು ಹರಿಸಲು ಸಿದ್ದವಾಗಿದೆ. ಮೊದಲ ಹಂತದಲ್ಲಿ 100-200 ಎಂಎಲ್ಡಿ ನೀರು ಹರಿಸುವ ಗುರಿ ಹೊಂದಿದೆ. ಹಂತ ಹಂತವಾಗಿ ನೀರು ಪೂರೈಸುವ ಯೋಜನೆ ರೂಪಿಸಿರುವುದನ್ನು ಹೆಚ್ಚು ಮಾಡುವುದಾಗಿ ಜಲಮಂಡಳಿ ತಿಳಿಸಿದೆ.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments