ಬೆಂಗಳೂರು: ಓರ್ವ ಮಹಿಳೆ ಆಕೆಯ ಇಬ್ಬರೂ ಮಕ್ಕಳನ್ನು ಸ್ಕೂಟರ್ನಲ್ಲಿ ತಮ್ಮ ಪಾಡಿಗೆ ತಾವು ಹೋಗುತ್ತಿದ್ದರಂತೆ. ಈ ವೇಳೆ ಬೇಕು ಬೇಕು ಅಂತ ಬಿಎಂಟಿಸಿ ತರ್ಲೆ ಚಾಲಕ ಹಾರ್ನ್ ಮಾಡಿದ್ದಾನೆ. ಅವರು ತಿರುಗಿ ನೋಡಲಿಲ್ಲ ಎನ್ನುವ ಏಕೈಕ ಕಾರಣಕ್ಕೆ ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದಾನೆ. ಚಾಲಕನ ನಿರ್ಲಕ್ಷ್ಯದಿಂದು ಸ್ವಲ್ಪ ಯಾಮಾರಿದರೂ ಇಂದು ಮೂವರು ಪ್ರಾಣ ಕಳೆದುಕೊಳ್ಳಬೇಕಾಗಿತ್ತು.
ಡಿಸೆಂಬರ್ ತಿಂಗಳಲ್ಲಿ ನಡೆದ ಮೊದಲ ಹಲ್ಲೆ
ಇತ್ತೀಚೆಗೆ ಬಿಎಂಟಿಸಿಯ ಕಂಡಕ್ಟರ್, ಡ್ರೈವರ್ಗಳ ಮೇಲೆ ಹಲ್ಲೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾಲ್ಕು ತಿಂಗಳಲ್ಲಿ ಇದು ಹತ್ತನೇ ಬಾರಿ ನಡೆದಿರುವ ಹಲ್ಲೆ ಪ್ರಕರಣವಾಗಿದ್ದರೆ, ನವೆಂಬರ್ ತಿಂಗಳಲ್ಲೇ ನಾಲ್ಕು ಕಂಡಕ್ಟರ್, ಡ್ರೈವರ್ಗಳ ಮೇಲೆ ಹಲ್ಲೆಯಾಗಿತ್ತು. ಡಿಸೆಂಬರ್ ತಿಂಗಳಲ್ಲಿ ನಡೆದ ಇದು ಮೊದಲ ಹಲ್ಲೆಯಾಗಿದೆ.
ಜಾಲಹಳ್ಳಿ ಕ್ರಾಸ್ನಿಂದ ಕೆಆರ್ ಮಾರುಕಟ್ಟೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್, ಸುಮ್ಮನಹಳ್ಳಿ ಬಿಡ್ಜ್ ಬಳಿ ಒಂದು ಬೈಕ್ಗೆ ಟಚ್ ಆಗಿದೆ. ಬೈಕ್ ಓಡಿಸುತ್ತಿದ್ದ ಮಹಿಳೆ ಇದರಿಂದ ಕೋಪಗೊಂಡು, ಬಸ್ ನಿಲ್ಲಿಸಿ ಚಾಲಕನನ್ನು ಎಳೆದು ಮನಬಂದಂತೆ ಥಳಿಸಿದ್ದಾಳೆ.
ನನ್ನ ಮತ್ತು ನನ್ನ ಮಕ್ಕಳನ್ನು ಕೊಲೆ ಮಾಡಲು ಹೀಗೆ ಮಾಡಿದ್ದಾನೆ. ಚೂರು ಯಾಮಾರಿದರೂ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದು ಕೂಗಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ತನ್ನ ಸಹೋದರನನ್ನು ಕರೆಸಿ ಡ್ರೈವರ್ಗೆ ಥಳಿಸಿದ್ದಾರೆ. ಆ ವೇಳೆ ಡ್ರೈವರ್ ಕುಸಿದು ಬಿದಿದ್ದು, ನಂತರ ಡ್ರೈವರ್ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.