Top Newsಮನರಂಜನೆಸುದ್ದಿ

Bigg Boss: ಮನೆಯಲ್ಲಿ ಜಗದೀಶ್‌ ಜೊತೆ ಮತ್ತೋರ್ವ ಪ್ರಬಲ ಸ್ಪರ್ಧಿಗೆ ಗೇಟ್ ಪಾಸ್.! ಯಾರದು?

‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಮೂರನೇ ವಾರವೇ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ‘ಬಿಗ್ ಬಾಸ್‌’ ಮನೆಯಲ್ಲಿ ಜಗಳ ತಾರಕಕ್ಕೇರಿದೆ. ಸ್ಪರ್ಧಿಗಳ ತಾಳ್ಮೆ, ಸಹನೆಯ ಮಿತಿ ಮೀರಿದ ಕಾರಣ ಹೊಡೆದಾಟ ನಡೆದಿದೆ. ಮಾರಾಮಾರಿ ಸಂಭವಿಸಿದ ಪರಿಣಾಮ ಜಗದೀಶ್‌ ಹೊರಬಿದ್ದಿದ್ದಾರೆ ಎನ್ನಲಾಗಿದೆ. ಜಗದೀಶ್‌ ಜೊತೆಗೆ ಮತ್ತೋರ್ವ ಸ್ಪರ್ಧಿಯೂ ಔಟ್ ಆಗಿದ್ದಾರಂತೆ. ಅವರ್ಯಾರು ಗೊತ್ತೇನು? ‘ಶನಿ’ ಸೀರಿಯಲ್‌ನ ಸೂರ್ಯದೇವ ಖ್ಯಾತಿಯ ರಂಜಿತ್!

ಸದ್ಯ ಕಿರುತೆರೆ ಅಂಗಳಲ್ಲಿ ಹಬ್ಬಿರುವ ಗಾಸಿಪ್‌ ನಿಜವೇ ಆದರೆ.. ‘ಬಿಗ್ ಬಾಸ್’ ಮನೆಯಿಂದ ಜಗದೀಶ್ ಹಾಗೂ ರಂಜಿತ್ ಹೊರಬಂದಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ಜಗದೀಶ್ ಮತ್ತು ರಂಜಿತ್ ಮಧ್ಯೆ ಮಾರಾಮಾರಿ ನಡೆದಿದ್ಯಂತೆ. ಪರಿಣಾಮ, ರೂಲ್ಸ್ ಅನ್ವಯ ಇಬ್ಬರನ್ನೂ ಹೊರದಬ್ಬಲಾಗಿದೆ ಅಂತ ಹೇಳಲಾಗುತ್ತಿದೆ.

ರಾತ್ರಿಯಷ್ಟೇ ಅದನ್ನೇ ಮಾತನಾಡಿಕೊಂಡಿದ್ದರು!

‘ಬಿಗ್ ಬಾಸ್’ ಮನೆಯಲ್ಲಿ ನಿನ್ನೆ ರಾತ್ರಿ ಜಗದೀಶ್‌ ರೊಚ್ಚಿಗೆದ್ದಿದ್ದರು. ‘ಬಿಗ್ ಬಾಸ್’ ಬಗ್ಗೆ ಮತ್ತು ಶೋ ಬಗ್ಗೆ ಕೆಟ್ಟಕೆಟ್ಟದಾಗಿ ಮಾತನಾಡಿದ ಕಾರಣ ಉಳಿದ ಸ್ಪರ್ಧಿಗಳು ಸಿಡಿದೆದ್ದರು. ಅದರಲ್ಲೂ ಉಗ್ರಂ ಮಂಜು ಮತ್ತು ರಂಜಿತ್‌ ಉಗ್ರಾವತಾರ ತಾಳಿದರು. ‘’ಇತರೆ ಸ್ಪರ್ಧಿಗಳು ಇದರಲ್ಲಿ ಪ್ರವೇಶಿಸುವ ಅಗತ್ಯ ಇಲ್ಲ’’ ಎಂದು ‘ಬಿಗ್ ಬಾಸ್’ ಸಂದೇಶ ರವಾನಿಸಿದ್ಮೇಲೆ ಎಲ್ಲರೂ ಸೈಲೆಂಟ್ ಆದರು. ಆದರೆ, ಜಗದೀಶ್‌ ಸುಮ್ಮನಿರದೆ ಚೈತ್ರಾ ಕುಂದಾಪುರ ಅವರನ್ನ ಕೆಣಕಿದರು. ಈ ವೇಳೆ ಚೈತ್ರಾ ಕುಂದಾಪುರ ಕನಲಿ ಕೆಂಡವಾದರು. ಆನಂತರ ಜಗದೀಶ್‌ ಅವರನ್ನ ಕೆಲಕಾಲ ಕನ್‌ಫೆಶನ್‌ ರೂಮ್‌ನಲ್ಲಿ ಇರಿಸಲಾಗಿತ್ತು.

ಜಗದೀಶ್‌ ಕನ್‌ಫೆಶನ್‌ ರೂಮ್ ಒಳಗೆ ಹೋದ್ಮೇಲೆ, ‘’ಒದೆ ತಿನ್ನೋಕೆ ಕಾಯ್ತಾವ್ನಾ? ಒದೆ ತಿನ್ನಿಸಿಕೊಂಡೇ ಹೋಗ್ತಾನಾ?’’ ಅಂತ ರಂಜಿತ್ ಕಾಮೆಂಟ್ ಮಾಡಿದ್ದರು. ಅದಕ್ಕೆ, ‘’ಅದೇ ಉದ್ದೇಶ. ನಾವು ಕೈ ಎತ್ತಲಿ ಅನ್ನೋದೇ ಅವರ ಉದ್ದೇಶ. ಕೈ ಎತ್ತಿ, ನಮ್ಮತ್ರ ಹೊಡೆಸಿಕೊಂಡು, ಹೊರಗಡೆ ಹೀರೋ ಆಗೋಕೆ ಪ್ಲಾನ್‌’’ ಎಂದು ಚೈತ್ರಾ ಕುಂದಾಪುರ ಹೇಳಿದ್ದರು. ರಾತ್ರಿಯಷ್ಟೇ ಚೈತ್ರಾ ಕುಂದಾಪುರ ಜೊತೆ ರಂಜಿತ್ ಹೀಗೆ ಮಾತನಾಡಿಕೊಂಡು, ಮಾರನೇ ದಿನ ಅದೇ ತಪ್ಪನ್ನ ರಂಜಿತ್ ಮಾಡಿಬಿಟ್ರಾ? ಎಂಬ ಪ್ರಶ್ನೆ ಎದ್ದಿದೆ.

ರೆಡ್ ಕಾರ್ಡ್ ಕೊಟ್ರಾ ‘ಬಿಗ್ ಬಾಸ್’?

ಹೊಡೆದಾಡಿಕೊಂಡ ಜಗದೀಶ್ ಮತ್ತು ರಂಜಿತ್‌ಗೆ ‘ಬಿಗ್ ಬಾಸ್‌’ ರೆಡ್ ಕಾರ್ಡ್ ಕೊಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದು ಎಷ್ಟರಮಟ್ಟಿಗೆ ನಿಜ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಅಷ್ಟಕ್ಕೂ ಈ ವಾರದ ಆರಂಭದಲ್ಲೇ ‘’ನಿಮ್ಮೆಲ್ಲರ ವರ್ತನೆಯಿಂದ ಬೇಸೆತ್ತು ಬ್ರೇಕ್ ಪಡೆಯುತ್ತಿದ್ದೇನೆ’’ ಎಂದು ಸ್ಪರ್ಧಿಗಳಿಗೆ ‘ಬಿಗ್ ಬಾಸ್’ ತಿಳಿಸಿದ್ದರು. ‘ಬಿಗ್ ಬಾಸ್’ ಅನುಪಸ್ಥಿತಿಯಲ್ಲಿ ಮನೆಯನ್ನ ನೋಡಿಕೊಳ್ಳುವ ಜವಾಬ್ದಾರಿ ಕ್ಯಾಪ್ಟನ್‌ ಶಿಶಿರ್ ಶಾಸ್ತ್ರಿ ಮೇಲಿತ್ತು. ಮನೆಯೊಳಗಿನ ಫೋನ್ ಬೂತ್‌ ಮೂಲಕ ಕ್ಯಾಪ್ಟನ್‌ ಶಿಶಿರ್‌ಗೆ ಬಿಗ್ ಬಾಸ್ ಸಂದೇಶಗಳನ್ನ ರವಾನಿಸುತ್ತಿದ್ದರು. ‘ಬಿಗ್ ಬಾಸ್‌’ ಅನುಪಸ್ಥಿತಿಯಲ್ಲಿ ಹೊಡೆದಾಟ ನಡೆದಿದ್ದು, ಇಬ್ಬರ ದಿಢೀರ್ ಎಲಿಮಿನೇಷನ್‌ಗೆ ಕಾರಣವಾಗಿದೆ.

Comments (0)

Your email address will not be published. Required fields are marked *

Back to top button