Wednesday, April 30, 2025
32 C
Bengaluru
LIVE
ಮನೆ#Exclusive NewsTop Newsದೀಪಾವಳಿ ಪಟಾಕಿಯಿಂದ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಳ! ಯಾವ ಏರಿಯಾದಲ್ಲಿ ಎಷ್ಟಿದೆ?

ದೀಪಾವಳಿ ಪಟಾಕಿಯಿಂದ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಳ! ಯಾವ ಏರಿಯಾದಲ್ಲಿ ಎಷ್ಟಿದೆ?

ಬೆಂಗಳೂರು: ಬೆಂಗಳೂರು ನಗರದಲ್ಲಿ ದೀಪಾವಳಿ ಹಬ್ಬದ ಸಡಗರ ಮನೆ ಮಾಡಿದೆ. ಜನರು ಬಹಳ ವಿಜೃಂಭಣೆಯಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಮಕ್ಕಳು, ದೊಡ್ಡವರು ಎಲ್ಲರು ಒಂದುಗೂಡಿ ದೀಪ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ನಗರದಲ್ಲಿ ಪಟಾಕಿ ಸದ್ದು ಜೋರಾಗಿದೆ. ಆದರೆ, ಪಟಾಕಿಯಿಂದ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆ. ಕಳೆದ ಒಂದು ವಾರಕ್ಕೆ ಹೋಲಿಕೆ ಮಾಡಿದರೆ, ಈ ವಾರ ವಾಯುಮಾಲಿನ್ಯ ಬಹಳಷ್ಟು ಹೆಚ್ಚಳವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ಕಳೆದ ವಾರ 50ರ ಆಸುಪಾಸಿನಲ್ಲಿದ್ದಂತಹ ವಾಯು ಪ್ರಮಾಣ ಎರಡು-ಮೂರು ದಿನದಲ್ಲಿ‌ 100ರ ಗಡಿ ದಾಟಿದ್ದು, ಕಳಪೆ ಗುಣಮಟ್ಟದ ಗಾಳಿಯನ್ನ ಹೊಂದಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ 50 ಎಕ್ಯೂ ಇದ್ದರೆ ಉತ್ತಮ ಗಾಳಿ ಎಂದರ್ಥ. 60 ರಿಂದ 80 ರ ಗಡಿಯಲ್ಲಿದ್ದರೆ ಸಾಧಾರಣ ಗುಣಮಟ್ಟದಲ್ಲಿದೆ. 100 ರಿಂದ 150ರ ಆಸುಪಾಸಿನಲ್ಲಿದ್ದರೆ ಉಸಿರಾಡಲು ಯೋಗ್ಯವಲ್ಲದ ಗಾಳಿ ಎಂದು ಹೇಳಲಾಗುತ್ತದೆ. ಸದ್ಯ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ 130ರ ಗಡಿ ದಾಟಿದೆ.

ನಿಯಮಗಳೆಲ್ಲಾ ಗಾಳಿಗೆ ತೂರಿ ಪಟಾಕಿ

ದೀಪಾವಳಿ ಹಬ್ಬಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಹಸಿರು ಪಟಾಕಿ ಮಾರುವುದಕ್ಕೆ ಮಾತ್ರ ಅನುಮತಿ ನೀಡಿತ್ತು. ಇನ್ನು ಸರಕಾರ ಸಹ ಹಸಿರು ಪಟಾಕಿ ಮಾರಬೇಕು. ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಸಮಯ ನಿಗದಿ ಮಾಡಿತ್ತು. ಆದಧಿರೆ, ಜನ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪಟಾಕಿ ಸಿಡಿಸುತ್ತಿದ್ದಾರೆ. ಹೀಗಾಗಿ ಮಾಲಿನ್ಯ ಹೆಚ್ಚಳವಾಗಿದೆ.

ಇಂದಿನ ಗಾಳಿಯ ಗುಣಮಟ್ಟವಿದೆ

ಜಯನಗರದಲ್ಲಿ – 124 (ಎಕ್ಯೂಐ), ಬಿಟಿಎಂ ಲೇಔಟ್ – 130 (ಎಕ್ಯೂಐ), ಬಾಪುಜಿನಗರ – 110 (ಎಕ್ಯೂಐ), ಸಿಲ್ಕ್ ಬೋರ್ಡ್- 97 (ಎಕ್ಯೂಐ), ಮಹದೇವಪುರ – 74 (ಎಕ್ಯೂಐ), ಹೆಬ್ಬಾಳ – 142 (ಎಕ್ಯೂಐ), ಪೀಣ್ಯ – 141 (ಎಕ್ಯೂಐ), ಸಿಟಿ ರೈಲ್ವೆ ಸ್ಟೇಷನ್ – 84 (ಎಕ್ಯೂಐ), ಜಿಗಣಿ – 133 (ಎಕ್ಯೂಐ), ಬಾಪುಜಿನಗರ – 98 (ಎಕ್ಯೂಐ), ಹೊಂಬೆಗೌಡ ನಗರ – 95 (ಎಕ್ಯೂಐ), ನಿಮ್ಯಾನ್ಸ್ ರಸ್ತೆ – 114 ಎಕ್ಯೂನಷ್ಟು ಗಾಳಿ ಗುಣಮಟ್ಟವಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments