ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ವೀಕೆಂಡ್ ಬ್ಯೂಸಿಯಲ್ಲಿದ್ದ ಪಬ್ಗಳಿಗೆ ಪೊಲೀಸರು ಬಿಸಿಮುಟ್ಟಿಸಿದ್ದಾರೆ. ಓವರ್ ನೈಟ್ ಪಾರ್ಟಿಗೆ ಅವಕಾಶ ಮಾಡಿಕೊಡುತ್ತಿದ್ದ ಪಬ್ಗಳ ಮೇಲೆ ತಡರಾತ್ರಿ ಕೇಂದ್ರ ವಿಭಾಗ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಶೇಖರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಅವಧಿ ಮೀರಿ ನಡೆಸುತ್ತಿದ್ದ ವಿರಾಟ್ ಕೊಹ್ಲಿ ಮಾಲೀಕತ್ವದ 18 ಪಬ್ ಸೇರಿ 15 ಪಬ್ಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ಸ್ಟ್ರೀಟ್ ಸೇರಿ ಹಲವೆಡೆ ದಾಳಿ ಮಾಡಲಾಗಿತ್ತು.
ನಿನ್ನೆ ತಡರಾತ್ರಿ ಕೇಂದ್ರ ವಿಭಾಗ ಪೊಲೀಸರಿಂದ ಸ್ಪೆಷಲ್ ಡ್ರೈವ್ ಮಾಡಿದ್ದು, ಸುಮಾರು 15 ಪಬ್ ಗಳ ವಿರುದ್ಧ ಓವರ್ ನೈಟ್ ಪಾರ್ಟಿಗೆ ಅವಕಾಶ ಮಾಡಿಕೊಟ್ಟ ಆರೋಪದ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪಬ್ ಗಳಲ್ಲಿ ಅತಿಯಾದ ಸೌಂಡ್, ಓವರ್ ನೈಟ್ ಪಾರ್ಟಿ ಬಗ್ಗೆ ಬಂದಿದ್ದ ದೂರುಗಳ ಆಧಾರದ ಮೇರೆಗೆ ಪೊಲೀಸರು ತಡರಾತ್ರಿ ಸ್ಪೆಷಲ್ ಡ್ರೈವ್ ಕೈಗೊಂಡಿದ್ದಾರೆ. ಇನ್ನು ಪೊಲೀಸರ ದಿಢೀರ್ ದಾಳಿಯಿಂದ ಪಬ್ ಸಿಬ್ಬಂದಿ ಕಂಗಾಲಾಗಿದ್ದು, ಪಬ್ ಬಂದ್ ಮಾಡಿ ಒತ್ತಾಯಪೂರ್ವಕವಾಗಿ ಗ್ರಾಹಕರನ್ನ ಸಿಬ್ಬಂದಿ ಕಳುಹಿಸಿಕೊಟ್ಟಿದ್ದಾರೆ.
ಗುರಾಯಿಸಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಕೊಲೆ
ಗುರಾಯಿಸಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಯುವಕನ ಕೊಲೆ ಆಗಿದೆ. ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಈ ಕೊಲೆ ಆಗಿದೆ. ಹೊಯ್ಸಳನಗರದ ಮನೋಜ್ ಕೊಲೆಯಾದ ಯುವಕ. ರಸ್ತೆಯಲ್ಲಿ ಸ್ನೇಹಿತರೊಂದಿಗೆ ಹೋಗುತ್ತಿದ್ದ ಮನೋಜ್ನನ್ನ ಎದುರಿಗೆ ಬರುತ್ತಿದ್ದ ವ್ಯಕ್ತಿ ಗುರಾಯಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆಗಿದೆ. ಪರಿಸ್ಥಿತಿ ಕೈ ಮೀರಿ ಮನೋಜ್ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮನೋಜ್ ಸಾವನ್ನಪ್ಪಿದ್ದಾನೆ. ಈ ಸಂಬಂಧ ಇಬ್ಬರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗುದ್ದಿದ್ದನ್ನ ಪ್ರಶ್ನಿಸಿದಕ್ಕೆ ಡ್ಯಾಗರ್‌ನಿಂದ ಅಟ್ಯಾಕ್
ಆನೇಕಲ್ನಲ್ಲಿ ರೌಡಿಗಳ ಅಟ್ಟಹಾಸ ಮಿತಿ ಮೀರಿದೆ. ಬೈಕ್ ಗುದ್ದಿದ್ದನ್ನ ಪ್ರಶ್ನಿಸಿದಕ್ಕೆ ಡ್ರ್ಯಾಗರ್ನಿಂದ ಡೆಡ್ಲಿ ಅಟ್ಯಾಕ್ ಮಾಡಲಾಗಿದೆ. ಆನೇಕಲ್ ಪಟ್ಟಣದ ಬಸ್ ನಿಲ್ದಾಣದ ಬಳಿ ಈ ಘಟನೆ ಆಗಿದೆ. ಮೋಹನ್ ಎಂಬಾತನ ಮೇಲೆ ಪುಡಿರೌಡಿಗಳು ಹಲ್ಲೆ ಮಾಡಿದ್ದಲ್ಲದೇ, ಅಲ್ಲಿದ್ದ ಜನರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿದ್ದಾರೆ. ಓರ್ವ ಪುಡಿ ರೌಡಿಯನ್ನ ಜನರು ಹಿಡಿದಿದ್ದು, ಮತ್ತೊಬ್ಬ ಪರಾರಿ ಆಗಿದ್ದಾನೆ.