Bengaluru | ತಾಂತ್ರಿಕ ತೊಂದೆರೆ – ಅರ್ಧಗಂಟೆ ಸ್ಥಗಿತಗೊಂಡ ನಮ್ಮ ಮೆಟ್ರೊ

ಬೆಂಗಳೂರು :ಬೆಂಗಳೂರು ನಾಗರೀಕರ ಸಂಚಾರಕ್ಕೆ ಬಹುಮುಖ್ಯವಾದ ಅಂಗ ಎಂದರೆ ಅದು ನಮ್ಮ ಮೆಟ್ರೊ ಸಂಚಾರ, ಬೆಳಗಿನ ಜಾವದಲ್ಲಿ ನಗರದ ಅನೇಕ ಜನರು ಪ್ರತಿನಿತ್ಯ ತೆರಳಲು ಮೆಟ್ರೊವನ್ನು ನಂಬಿಕೊAಡಿರುತ್ತಾರೆ ಇಂದು ರೀತಿಯಲ್ಲಿ ಜನರ ಜೀವನಾಡಿ ಅಂತಲೆ ಕರೆಸಿಕೊಳ್ಳೊ ಮೆಟ್ರೊ ಇಂದು ಅರ್ಧಗಂಟೆಗಳ ಸ್ಥಗಿತಗೊಂಡುದ್ದು ಮೆಟ್ರೊ ಸಂಚಾರಿಗಳು ತಕ್ಕ ಮಟ್ಟಿಗೆ ತೊಂದರೆ ಅನುಭವಿಸಿದ್ದಾರೆ.

ಅರ್ಧಗಂಟೆ ಮಟ್ರೊ ಸ್ಥಗಿತಕ್ಕೆ ಇಲ್ಲಿದೆ ನಿಜವಾದ ಕಾರಣ…!
ತಾಂತ್ರಿಕ ಸಮಸ್ಯೆಯಿಂದ ನಮ್ಮ ಮೆಟ್ರೊ ಹಸಿರು ಮಾರ್ಗ ಪೀಣ್ಯದಿಂದ ನಾಗಸಂದ್ರದವರೆಗಿನ ಮೆಟ್ರೊ ಸಂಚಾರ ಸುಮಾರು ಅರ್ಧಗಂಟೆಗಳ ಕಾಲ ಸ್ಥಗಿತಗೊಂಡಿತ್ತು.ಇಂದು ಬೆಳಗ್ಗೆ ೧೦.೧೮ ಕ್ಕೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಬಿಎಂಆರ್‌ಸಿಎಲ್ ತಾಂತ್ರಿಕ ಸಿಬ್ಬಂದಿ ಬಂದು ಸರಿಪಡಿಸಿದ ನಂತರ ಸುಮಾರು ೧೦.೫೦ಕ್ಕೆ ಮೆಟ್ರೊ ಸಂಚಾರ ಪುನಾರಂಭಗೊAಡಿದೆ ಎಂದು ಮೆಟ್ರೊ ಅಧಿಕಾಗಳು ಮಾಹಿತಿ ನೀಡಿದರು.ಪೀಣ್ಯದಿಂದ ನಾಗಸಂದ್ರವರೆಗಿನ ಮಾತ್ರ ಸಂಚಾರ ಸ್ಥಗಿತಗೊಳಿಸಲಾಗಿತ್ತು ಎಂಬುದಾಗಿ ಮಾಹಿತಿ ನೀಡಿದ್ದಾರೆ.



