ಧರ್ಮಸ್ಥಳ ಕೇಸ್ ಬಗ್ಗೆ ಯೂಟ್ಯೂಬ್ ವಿಡಿಯೋ ಮಾಡಿದ್ದ ಸಮೀರ್ ಮನೆಗೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿದ್ದಾರೆ..
ಬೆಂಗಳೂರು ಹೊರವಲಯದ ಬನ್ನೇರುಘಟ್ಟದ ಸಮೀಪದ ಹುಲ್ಲಹಳ್ಳಿ ರಾಯಲ್ ರೆಸಿಡೆನ್ಸಿ ಬಡಾವಣೆಯಲ್ಲಿರುವ ಯೂಟ್ಯೂಬರ್ ಸಮೀರ್‌ನ ಬಾಡಿಗೆ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಸಮೀರ್ ಮನೆಗೆ ಪೊಲೀಸರು ಈ ಬಾರೀ ಸರ್ಚ್ ವಾರಂಟ್‌ನೊಂದಿಗೆ ಎಂಟ್ರಿ ಕೊಟ್ಟು ತನಿಖೆ ನಡೆಸಸಿದ್ದಾರೆ. ಬೆಳ್ತಂಗಡಿ ಕೋರ್ಟ್‌ನಿಂದ ಒಂದು ದಿನದ ಹಿಂದೆ ಸರ್ಚ್ ವಾರಂಟ್ ಪಡೆದುಕೊಂಡ ಪೊಲೀಸರು, ಸಮೀರ್‌ನ ಮನೆಗೆ ತೆರಳಿ ತನಿಖೆ ಕೈಗೊಂಡಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಸಮೀರ್‌ನ ಪಾತ್ರದ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡಿದ ಆರೋಪದಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.