ಬೆಳಗಾವಿ: ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಸರ್ಕಾರಿ ಬಸ್ ಹರಿದ ಪರಿಣಾಮ ಬಾಲಕ ಸ್ಥಳದಲ್ಲೆ ಮೃತಪೆಟ್ಟಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಗಲಗಲಿ ಆಸ್ಪತ್ರೆ ಬಳಿ ಘಟನೆ. ನಿವಾಸಿ ಸುನೀಲ್ ಬಂಡರಗರ್(10) ಮೃತ ಬಾಲಕ. ಇನ್ನು ಟ್ಯೂಷನ್ ಮುಗಿಸಿ ಮೂತ್ರ ವಿಸರ್ಜನೆಗೆ ಗೆಳೆಯರ ಜೊತೆಗೆ ಹೊರ ಬಂದಿದ್ದು, ಗೆಳೆಯರೊಟ್ಟಿಗೆ ರಸ್ತೆ ಬದಿ ಬಾಲಕ ನಿಂತಿದ್ದನ್ನು. ಮಕ್ಕಳು ನಿಂತಿದ್ದನ್ನ ಮಕ್ಕನ್ನು ಲೆಕ್ಕಿಸದ ಚಾಲಕ ಸಾರಿಗೆ ಬಸ್ ಶಾಲಾ ಮಕ್ಕಳ ಮೇಲೆ ಹರಿಸಿದ್ದು, ಭೀಕರ ರಸ್ತೆ ಅಪಘಾತವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಥಣಿಯಿಂದ ಕಾರವಾರ ಹೋಗುತ್ತಿದ್ದ ಕಡೆಗೆ ಸರ್ಕಾರಿ ಬಸ್ ಹೋಗುತ್ತಿದ್ದು, ಚಾಲಕನ ನಿರ್ಲಕ್ಷ್ಯವೆ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರ ಆಕ್ರೋಶ ವ್ತಕ್ತಪಡಿಸುತ್ತಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.